ಮೃತ ಖಮೇನಿಯ ಅಧಿಕೃತ ‘X’ ಖಾತೆಯಿಂದ ಪೋಸ್ಟ್| ದಾಳಿಗೆ ಪ್ರತಿಕಾರ ತೀರಿಸುವುದಾಗಿ ಸಂದೇಶ

ಸಮಗ್ರ ನ್ಯೂಸ್: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾದ ಕೆಲವೇ ದಿನಗಳಲ್ಲಿ, ಅವರ ಅಧಿಕೃತ ‘X’ ಖಾತೆಯಲ್ಲಿ ಪ್ರಕಟವಾದ ಒಂದು ಪೋಸ್ಟ್ ಈಗ ಇಡೀ ಜಗತ್ತಿನ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.

Ad Widget ... ..

ಈ ಪೋಸ್ಟ್‌ನಲ್ಲಿ ‘ಖೋರಂಶಹರ್ ಕ್ಷಣಗಳು’ ಬರಲಿವೆ ಎಂಬ ಎಚ್ಚರಿಕೆ ನೀಡಲಾಗಿದ್ದು, ಇದು ಇರಾನ್‌ನ ಮುಂದಿನ ಆಕ್ರಮಣಕಾರಿ ನಡೆಯ ಮುನ್ಸೂಚನೆಯೇ ಎಂಬ ಚರ್ಚೆ ಶುರುವಾಗಿದೆ.

Ad Widget

​’ಖೋರಂಶಹರ್’ ಎಂಬುದು ಇರಾನ್-ಇರಾಕ್ ಯುದ್ಧದ (1980-88) ಸಮಯದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ ಇರಾನ್‌ನ ಒಂದು ಬಂದರು ನಗರ. 1980ರಲ್ಲಿ ಇರಾಕ್ ಈ ನಗರವನ್ನು ವಶಪಡಿಸಿಕೊಂಡಾಗ ಸಾವಿರಾರು ಇರಾನಿಗಳು ಬಲಿಯಾಗಿದ್ದರು. ಇದನ್ನು ಇರಾನಿಗಳು ‘ಖುನಿನಶಹರ್’ (ರಕ್ತದ ನಗರ) ಎಂದು ಕರೆದಿದ್ದರು.

​ತಜ್ಞರ ಪ್ರಕಾರ, ‘ಖೋರಂಶಹರ್ ಕ್ಷಣಗಳು’ ಎಂಬ ಪದ ಬಳಕೆ ಎರಡು ಮುಖ್ಯ ವಿಚಾರಗಳನ್ನು ಸೂಚಿಸುತ್ತದೆ. ಇರಾನ್ ತನ್ನ ನಾಯಕನ ಸಾವಿಗೆ ಭೀಕರ ಸೇಡು ತೀರಿಸಿಕೊಳ್ಳಲು ಸಿದ್ಧವಾಗುತ್ತಿದೆ ಮತ್ತು ಕಳೆದುಕೊಂಡಿದ್ದನ್ನು ಮರಳಿ ಪಡೆಯುವ ಹಠಕ್ಕೆ ಬಿದ್ದಿದೆ ಎಂಬ ಸಂದೇಶ. ದೇಶವು ಸಂಕಷ್ಟದಲ್ಲಿದ್ದಾಗ ಇಡೀ ಜನತೆ ಒಂದಾಗಿ ಹೋರಾಡಿ ವಿಜಯ ಸಾಧಿಸುವ ಸಮಯ ಬಂದಿದೆ ಎಂದು ತನ್ನ ಬೆಂಬಲಿಗರಿಗೆ ಕರೆ ನೀಡುವುದು.

Leave a Comment

Your email address will not be published. Required fields are marked *