ಅಮೇರಿಕಾದ ಎಚ್ಚರಿಕೆ ನಡುವೆಯೇ ಇಸ್ರೇಲ್ ರಾಜಧಾನಿ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ

ಸಮಗ್ರ ನ್ಯೂಸ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಏರಿಕೆಯಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಕಠಿಣ ಎಚ್ಚರಿಕೆಯ ಹೊರತಾಗಿಯೂ ಇರಾನ್ ಇಂದು ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಗರೆದಿದೆ. ಇಸ್ರೇಲ್‌ನ ರಾಜಧಾನಿ ಜೆರುಸಲೇಮ್ ಸೇರಿದಂತೆ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

Ad Widget ... ..

ಇರಾನ್ ಸೈನ್ಯವು ಇಸ್ರೇಲ್‌ನ ಆಯಕಟ್ಟಿನ ಪ್ರದೇಶಗಳು ಮತ್ತು ಪ್ರಮುಖ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಆಕಸ್ಮಿಕ ದಾಳಿಯಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Ad Widget

ದಾಳಿಗೂ ಮುನ್ನವಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಆ ಎಚ್ಚರಿಕೆಯನ್ನು ಲೆಕ್ಕಿಸದೆ ಇರಾನ್ ಈ ಸಾಹಸಕ್ಕೆ ಕೈಹಾಕಿದೆ.

ಇಸ್ರೇಲ್‌ನ ‘ಐರನ್ ಡೋಮ್’ ರಕ್ಷಣಾ ವ್ಯವಸ್ಥೆಯು ಹಲವು ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಇಸ್ರೇಲ್ ಅದಕ್ಕೆ ಪ್ರತಿದಾಳಿ ನಡೆಸುವ ಸಿದ್ಧತೆಯಲ್ಲಿದ್ದು, ಯುದ್ಧದ ಭೀತಿ ಮತ್ತಷ್ಟು ಆವರಿಸಿದೆ.

Leave a Comment

Your email address will not be published. Required fields are marked *