ರಿಚಾರ್ಜ್ ಮುಗಿದರೆ ಇನ್ ಕಮಿಂಗ್ ಕಾಲ್ ಕಟ್ ಯಾಕೆ? ಸಂಸದ ರಾಘವ್ ಚಡ್ಡಾ ಪ್ರಶ್ನೆಗೆ ಭಾರೀ ಬೆಂಬಲ

ಸಮಗ್ರ ನ್ಯೂಸ್: ಮೊಬೈಲ್ ಡೇಟಾ, ರೀಚಾರ್ಜ್ ಬೆಲೆ ದುಬಾರಿಯಾಗಿದೆ. ಇಷ್ಟೇ ಅಲ್ಲ ಉಚಿತವಾಗಿ ನೀಡಿದ ಎಲ್ಲಾ ಯೋಜನೆಗಳ ಅಸಲು ಬಡ್ಡಿಯನ್ನು ಟೆಲಿಕಾಂ ಕಂಪನಿಗಳು ಮರಳಿ ಪಡೆಯುತ್ತಿದೆ. ಈ ಪೈಕಿ ರೀಚಾರ್ಜ್ ಮಾಡದಿದ್ದರೆ,ಅದೇ ದಿನ ಔಟ್‌ಗೋಯಿಂಗ್ ಕಾಲ್ ಮಾತ್ರವಲ್ಲ ಇನ್‌ಕಮಿಂಗ್ ಕೂಡ ಕಡಿತಗೊಳ್ಳುತ್ತಿದೆ. ಇದರ ವಿರುದ್ದ ಆಪ್ ಸಂಸದ ರಾಘವ್ ಚಡ್ಡಾ ಗಮನಸೆಳೆದಿದ್ದಾರೆ.

Ad Widget ... ..

 ಟೆಲಿಕಾಂ ಆಪರೇಟರ್ ವಿರುದ್ದ ರಾಘವ್ ಚಡ್ಡ ಸಂಸತ್ತಿನಲ್ಲಿ ಎತ್ತಿದ್ದಾರೆ. ಹಲವರು ತಮ್ಮ ಅಗತ್ಯದ ಸಂವಹನಕ್ಕಾಗಿ, ಉದ್ಯೋಗದ ಕಾರಣದಿಂದ ಮೊಬೈಲ್ ಬಳಸುತ್ತಾರೆ. ಬಡವರು ಹಲವು ಬಾರಿ ವ್ಯಾಲಿಟಿಡಿ ಮುಗಿದ ದಿನವೇ ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಟೆಲಿಕಾಂ ಆಪರೇಟರ್ಸ್ ಅವರ ಔಟ್‌ಗೋಯಿಂಗ್ ಕಾಲ್ ಮಾತ್ರವಲ್ಲ ಇನ್‌ಕಮಿಂಗ್ ಕೂಡ ಕಟ್ ಮಾಡುತ್ತಿದೆ. ಇದು ಸರಿಯಲ್ಲ ಎಂದಿದ್ದಾರೆ.

Ad Widget

ವ್ಯಾಲಿಟಿಡಿ ಮುಗಿದಾಗ, ರೀಚಾರ್ಜ್ ಅವಧಿ ಮುಗಿದಾಗ, ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದಾಗ ಔಟ್ ಗೋಯಿಂಗ್ ಕರೆಗಳನ್ನು ನಿರ್ಬಂಧಿಸುವುದರಲ್ಲಿ ಅರ್ಥವಿದೆ. ಆದರೆ ಇನ್‌ಕಮಿಂಗ್ ಕರೆ, ಮೆಸೇಜ್ ಎಲ್ಲವನ್ನೂ ತಡೆಯುವುದು ಏಕೆ. ಭಾರತದಲ್ಲಿ ಮೊಬೈಲ್ ನಂಬರ್ ಆಧಾರ್ ಕಾರ್ಡ್, ಬ್ಯಾಂಕ್ ಸೇರಿದಂತೆ ಎಲ್ಲಾ ಸರ್ಕಾರಿ ಯೋಜನೆಗಳ ಜೊತೆ ಲಿಂಕ್ ಆಗಿರುತ್ತದೆ. ಇನ್‌ಕಮಿಂಗ್ ತಡೆ ಹಿಡಿಯುವುದರಿಂದ ಅವರಿಗೆ ಒಟಿಪಿ ಸೇರಿದಂತೆ ಇತರ ಅಗತ್ಯ, ತುರ್ತು ಸೇವೆಗಳು ಲಭ್ಯವಾಗುವುದಿಲ್ಲ ಎಂದು ರಾಘವ್ ಚಡ್ಡ ಹೇಳಿದ್ದಾರೆ.

ಭಾರತದಲ್ಲಿ ಟೆಲಿಕಾಂ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಭಾರತದಲ್ಲಿ ಬಹುತೇಕ ಮೊಬೈಲ್ ಅವಿಭಾಜ್ಯ ಅಂಗವಾಗಿದೆ. ಸರ್ಕಾರದ ಎಲ್ಲಾ ದಾಖಲೆಗಳಿಗೆ ಮೊಬೈಲ್ ನಂಬರ್ ನೀಡಬೇಕು. ಹೀಗಿರುವಾಗ ಇನ್‌ಕಮಿಂಗ್ ಕರೆ, ಮೆಸೇಜ್ ಕರ್ ಮಾಡುವ ಪದ್ಧತಿ ಯಾಕೆ, ಟೆಲಿಕಾಂ ಆಪರೇಟರ್ಸ್ ಲಾಭದ ಮೇಲೆ ಕಣ್ಣಿಟ್ಟಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ರಾಘವ್ ಚಡ್ಡ ಎತ್ತಿದ ಈ ಪ್ರಶ್ನೆಗಳಿಗೆ ಜನರಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಟೆಲಿಕಾಂ ಆಪರೇಟರ್ ಇದೀಗ ಆಡಿದ್ದೇ ಆಟವಾಗಿದೆ. ಅಧಿಪತ್ಯ ಸಾಧಿಸುತ್ತಿದ್ದಾರೆ. ಈ ಕುರಿತು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಟೆಲಿಕಾಂ ಆಪರೇಟರ್‌ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಎಂದಿದ್ದಾರೆ.

Leave a Comment

Your email address will not be published. Required fields are marked *