ಇಂದು (ಫೆ.17) ಕಂಕಣ ಸೂರ್ಯಗ್ರಹಣ

ಸಮಗ್ರ ನ್ಯೂಸ್: ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಇದು ‘ಕಂಕಣ ಸೂರ್ಯಗ್ರಹಣ’ವಾಗಿರಲಿದೆ ಎಂಬುದು ವಿಶೇಷವಾಗಿದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರುವ ಸಂದರ್ಭದಲ್ಲಿ ಸೂರ್ಯನ ಮಧ್ಯಭಾಗವನ್ನು ಮಾತ್ರ ಆವರಿಸುತ್ತಾ ಉಂಗುರದಂತೆ ಕಾಣಿಸುತ್ತದೆ.

Ad Widget ... ..

ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಮತ್ತು ಮುಖ್ಯವಾಗಿ ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ ಹಾಗೂ ಅಟ್ಲಾಂಟಿಕ್ ಸಾಗರದ ಕೆಲ ಪ್ರದೇಶಗಳಲ್ಲಿ ಮಾತ್ರ ಭಾಗಶಃ ಅಥವಾ ಸಂಪೂರ್ಣವಾಗಿ ಕಾಣಲಿದೆ. ಭಾರತದಲ್ಲಿನ ಸಾರ್ವಜನಿಕರಿಗೆ ಗ್ರಹಣಕ್ಕೆ ಸಂಬಂಧಿಸಿದ ಯಾವುದೇ ಸೂತಕ ಅಥವಾ ದೈನಂದಿನ ಚಟುವಟಿಕೆಗಳಲ್ಲಿ ನಿರ್ಬಂಧಗಳು ಅನ್ವಯಿಸುವುದಿಲ್ಲ.

Ad Widget

ಗ್ರಹಣವನ್ನು ವೀಕ್ಷಿಸುವವರು ವಿಶೇಷ ಸೋಲಾರ್ ಫಿಲ್ಟರ್ ಅಥವಾ ಟೆಲಿಸ್ಕೋಪ್ ಬಳಸಿ ಮಾತ್ರ ನೋಡಬೇಕು, ಇಲ್ಲದಿದ್ದರೆ ಕಣ್ಣಿಗೆ ಹಾನಿಯಾಗಬಹುದು. ಆಸಕ್ತರು ಲೈವ್ ಸ್ಟ್ರೀಮಿಂಗ್ ಮೂಲಕ ಈ ಅದ್ಭುತ ದೃಶ್ಯವನ್ನು ಅನುಭವಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯಲ್ಲಿ ಸಂಭವಿಸುತ್ತಿರುವ ಈ ಗ್ರಹಣವು ಕೆಲವು ರಾಶಿಗಳ ಮೇಲೆ ವೈಯಕ್ತಿಕ, ಆರ್ಥಿಕ ಮತ್ತು ಆರೋಗ್ಯ ಸಂಬಂಧಿ ಪ್ರಭಾವ ಬೀರುತ್ತದೆ:

ಸಿಂಹ ರಾಶಿಗೆ ವೈವಾಹಿಕ ವ್ಯವಹಾರಗಳಲ್ಲಿ ಸಣ್ಣ ಭಿನ್ನಾಭಿಪ್ರಾಯ, ಕಟಕ ರಾಶಿಗೆ ಆರೋಗ್ಯ ಮತ್ತು ಹಣಕಾಸಿನ ಕಡೆ ಹೆಚ್ಚು ಜಾಗರೂಕತೆ, ವೃಶ್ಚಿಕ ರಾಶಿಗೆ ತಾಯಿಯ ಆರೋಗ್ಯ ಮತ್ತು ಆಸ್ತಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

Leave a Comment

Your email address will not be published. Required fields are marked *