ಸಮಗ್ರ ನ್ಯೂಸ್: ಬೆಳ್ತಂಗಡಿ ಕಾಲೇಜು ವಿಧ್ಯಾರ್ಥಿನಿ ಅಪಹರಣದಂತಹ ಕೃತ್ಯ ಹಾಡುಹಗಲೇ ನಡೆದಿರೋದು ಪೋಲೀಸ್ ವೈಫಲ್ಯಕ್ಕೆ ಉದಾಹರಣೆ, ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲ, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ ವಿಧ್ಯಾರ್ಥಿನಿ ಅಪಹರಣಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಧ್ಯಾರ್ಥಿನಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಘಟನೆ ಇದು ಕೇವಲ ಒಂದು ಚಿಕ್ಕ ಘಟನೆ ಅಲ್ಲ. ಬೆಳ್ಳಂ ಬೆಳಗ್ಗೆ ಈ ರೀತಿಯ ಘಟನೆ ಆಗ್ತದೆ ಅಂತ ಹೇಳಿದ್ರೆ ಇನ್ನು ಮುಂದೆ ಸಮಾಜದಲ್ಲಿ ಓಡಾಡಲಿಕ್ಕೂ ಹೆದರಬೇಕಾದಂತ ಯೋಚನೆ ಮಾಡಬೇಕಾದಂತ ಪರಿಸ್ಥಿತಿ ಇದೆ. ಗೃಹ ಇಲಾಖೆ ತಕ್ಷಣ ಇದರ ಏನು ಇದರ ಹಿಂದೆ ಯಾರಿದ್ದಾರೆ ಪತ್ತೆಹಚ್ಚಬೇಕೆಂದು ಆಗ್ರಹಿಸಿದರು.
ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಪೊಲೀಸ್ ಇಲಾಖೆ ನಿಷ್ಕ್ರಿಯತೆ ಇದೆ ಅದನ್ನು ಸರಿಪಡಿಸದಿದ್ದರೆ ಈ ರೀತಿಯ ಕಾನೂನಿನ ಉಲ್ಲಂಘನೆ ಆಗಿ ಅಶಾಂತಿ ನಿರ್ಮಾಣವಾಗಲಿದೆ ಎಂದರು.






