ಕಾಸರಗೋಡು: ‘ಕುಣಿಯ’ದಲ್ಲಿ ಸಮಸ್ತ ಶತಮಾನೋತ್ಸವ ಸಂಭ್ರಮ

ಸಮಗ್ರ ನ್ಯೂಸ್: ನೂರು ವಸಂತಗಳನ್ನು ಪೂರೈಸಿರುವ ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಸಂಘಟನೆಯು ತನ್ನ ಶತಮಾನೋತ್ಸವ ಸಂಭ್ರಮಕ್ಕೆ ಇಲ್ಲಿನ ಕುಣಿಯ ಪಟ್ಟಣ ಸಜ್ಜಾಗಿದ್ದು, ಸಕಲ ಸಿದ್ಧತೆ ನಡೆದಿದೆ. ಬುಧವಾರ (ಫೆ.4)ರಂದು ಕಾರ್ಯಕ್ರಮಕ್ಕೆ ಚಾಲನೆ ದೊರತಿದ್ದು, ಅಧ್ಯಯನ ಶಿಬಿರ, ಗ್ಲೋಬಲ್ ಎಕ್ಸ್ಪೊಬಳಿಕ ಫೆ.8ರಂದು ಅಂತರರಾಷ್ಟ್ರೀಯ ಮಹಾಸಮ್ಮೇಳನ ನಡೆಯಲಿದೆ.

Ad Widget ... ..

ಬೃಹತ್‌ ಸ್ವಾಗತ ಕಮಾನುಗಳೊಂದಿಗೆ ವೇದಿಕೆ ಸಿಂಗಾರಗೊಂಡಿದ್ದು, ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳದ ಭಾಗದಲ್ಲಿ ಕಾರ್ಯಕ್ರಮದ ಫ್ಲೆಕ್ಸ್‌, ಧ್ವಜಗಳು ರಾರಾಜಿಸುತ್ತಿವೆ.

Ad Widget

ಇಸ್ಲಾಮಿನ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಸಮುದಾಯದೊಳಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ಪಂಡಿತ ಸಂಘಟನೆಯ ಹೆಸರಾಗಿದೆ ಸಮಸ್ತ. ಭಾರತೀಯ ಮುಸ್ಲಿಮರ ಆಶಾಕಿರಣದಂತೆ ಗುರುತಿಸಿಕೊಂಡಿರುವ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸದ್ಯ ಭಾರತದಲ್ಲಿ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಸೇವೆ ವಿಸ್ತರಿಸಿಕೊಂಡಿದೆ. ಸಮುದಾಯದ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನ ರೂಪಿಸುವಲ್ಲಿ ಸಮಸ್ತ ನಿರ್ಣಾಯ ಪಾತ್ರ ವಹಿಸುತ್ತಿದೆ.

1926ರಲ್ಲಿ ಜನ್ಮ ತಾಳಿದ ಸಮಸ್ತ ಆರಂಭದ ಯೋಜನೆಗಳ ಬಳಿಕ 1952ರ ಆಗಸ್ಟ್ 26ರಂದು ನಡೆದ ಬೋರ್ಡ್‌ ಸಭೆಯಲ್ಲಿ 10 ಮದ್ರಸಗಳನ್ನು (ಪಾಠ ಶಾಲೆ) ಅಂಗೀಕರಿಸಿತು. 2025ರ ಕಳೆದ ನವೆಂಬರ್‌ವರೆಗೆ 11,080ರಷ್ಟು ಮದ್ರಸಗಳು ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ ಅಧೀನದಲ್ಲಿ ಕಾರ್ಯಾಚರಿಸುತ್ತಿವೆ.

Leave a Comment

Your email address will not be published. Required fields are marked *