2026ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಗೆ ರಾಜ್ಯ ಸರ್ಕಾರ ಅನುಮೋದನೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ 2026ನೇ ಸಾಲಿನ 20 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಒಟ್ಟು 20 ಸಾರ್ವತ್ರಿಕ ರಜೆ ದಿನ ಹಾಗೂ 21 ಪರಿಮಿತ ರಜಾ ದಿನಗಳ ಪಟ್ಟಿಗೆ ಮಂಜೂರಾತಿ ನೀಡಿದೆ.

Ad Widget . Ad Widget . Ad Widget . Ad Widget . Ad Widget . Ad Widget .

ಭಾನುವಾರ ಬರುವ ಮಹಾ ಶಿವರಾತ್ರಿ (ಫೆ.15), ಮಹರ್ಷಿ ವಾಲ್ಮೀಕಿ ಜಯಂತಿ (ಅ.25), ಕನ್ನಡ ರಾಜ್ಯೋತ್ಸವ (ನ.1) ಹಾಗೂ ನರಕ ಚತುರ್ದಶಿ (ನ.8) ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆಯನ್ನು (ಅ.10) ಸಾರ್ವತ್ರಿಕ ರಜೆ ದಿನಗಳ ಪಟ್ಟಿಯಲ್ಲಿ ನಮೂದಿಸಿಲ್ಲ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ತರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.

ದಿನಾಂಕ:03.09.2026 (ಗುರುವಾರ) ಕೈಲ್ ಮೂಹೂರ್ತ, ದಿನಾಂಕ:18.10.2026 (ಭಾನುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:26.11.2026 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

Leave a Comment

Your email address will not be published. Required fields are marked *