ವಿಜಯಪುರ, ಕಲಬುರಗಿಯಲ್ಲಿ ಕಂಪಿಸಿದ ಭೂಮಿ| ಆತಂಕದಲ್ಲಿ ಮನೆಯಿಂದ ಹೊರಬಂದ ಜನತೆ

ಸಮಗ್ರ ನ್ಯೂಸ್: ವಿಜಯಪುರ, ಕಲಬುರಗಿ ಜಿಲ್ಲೆಯಲ್ಲಿ ಒಂದೇ ದಿನ ನಾಲ್ಕು ಬಾರಿ ಭೂಕಂಪನ ಉಂಟಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ಚಿಂಚೋಳಿ ತಾಲೂಕಿನ ಐನಾಪುರ, ಗಡಿನಿಂಗದಹಳ್ಳಿ, ಸೊಂತ, ಪಟವಾದ ಗ್ರಾಮದಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದೆ. ನಸುಕಿನ ಜಾವ ಭೂಮಿ ಕಂಪಿಸಿದೆ.

Ad Widget ... ..

ಅದೇ ರೀತಿ ವಿಜಯಪುರ ಸುತ್ತಮುತ್ತ ಮತ್ತೆ ಭೂಕಂಪನದ ಅನುಭವವಾಗಿದೆ. ರಾತ್ರಿ 10 ಗಂಟೆ 5 ನಿಮಿಷದ ಸುಮಾರಿಗೆ ಎರಡು ಬಾರಿ ಭೂಮಿ ಕಂಪಿಸಿದೆ. ಎರಡು ತಿಂಗಳಲ್ಲಿ ಬರೋಬ್ಬರಿ 12 ಬಾರಿ ಭೂಮಿ ಕಂಪಿಸಿದೆ. ಪದೇ ಪದೇ ಸರಣಿ ಭೂಕಂಪಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

Ad Widget

ಮಹಾರಾಷ್ಟ್ರ ಆಸುಪಾಸಿನಲ್ಲಿ ಈ ರೀತಿಯ ಭೂಕಂಪನದ ಅನುಭವವಾಗುತ್ತಿರುವುದು ಜನತೆಯ ನಿದ್ದೆಗೆಡಿಸಿದೆ. ಪದೇ ಪದೇ ಭೂಮಿ ಕಂಪಿಸುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

Leave a Comment

Your email address will not be published. Required fields are marked *