ಸಮಗ್ರ ನ್ಯೂಸ್: ಗಣಪತಿ ವಿಸರ್ಜನಾ ಮೆರವಣೆಗೆ ಮೇಲೆ ಟ್ರಕ್ ಒಂದು ನಿಯಂತ್ರಣ ತಪ್ಪಿ ಹರಿದ ಪರಿಣಾಮ ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿ ಹಲವು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಅವಘಡದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ದೌಡಾಯಿಸಿದ್ದಾರೆ. ಅದ್ಧೂರಿಯಾಗಿ ಗಣೇಶ ಮೆರವಣಿಗೆ ಸಾಗುತ್ತಿರುವ ವೇಳೆ ಟ್ರಕ್ವೊಂದು ಜನರ ಮೇಲೆ ನುಗ್ಗಿದೆ. ಚಾಲಕನ ಅಜಾಗುರಕತೆಯಿಂದ ಈ ಘಟನೆ ನಡೆದಿದೆ. ಡಿವೈಡರ್ಗೆ ಡಿಕ್ಕಿ ಆಗಿ ಜನರ ಮೇಲೆ ಟ್ರಕ್ ಹರಿದಿದೆ. ಇದರ ಪರಿಣಾಮ ಮೆರವಣಿಗೆಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆಯ ಹೆಚ್ಚಾಗುವ ಸಾಧ್ಯತೆ ಇದೆ.
ಸದ್ಯ ಸ್ಥಳದಲ್ಲೇ ಸಾವು-ನೋವು ಹೆಚ್ಚಾಗುವ ಸಂಭವವಿದೆ. ಲಾರಿ ಏಕಾಏಕಿ ನುಗ್ಗಿದ್ದರಿಂದ 10 ರಿಂದ 15 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕೆಲವರಂತೂ ನೋವಿನಿಂದ ನರಳುತ್ತಿದ್ದಾರೆ. ಇದು ಅಪಘಾತ ವಲಯ ಎಂದು ಗೊತ್ತಿದ್ದರೂ ಟ್ರಕ್ ವೇಗವಾಗಿ ಬಂದಿದ್ದೇ ಈ ದುರಂತಕ್ಕೆ ಕಾರಣವಾಗಿದೆ.







