ಶೇ.5 ಮತ್ತು ಶೇ.15ರ ತೆರಿಗೆ ಸ್ಲ್ಯಾಬ್ ಗೆ ಜಿಎಸ್ಟಿ ಮಂಡಳಿ ಅನುಮೋದನೆ| ಸೆ.22ರಿಂದ ನೂತನ ತೆರಿಗೆ ಜಾರಿಗೆ

ಸಮಗ್ರ ನ್ಯೂಸ್: ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿರುವ 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್ ದರಗಳಿಗೆ GST ಮಂಡಳಿ ಅನುಮೋದನೆ ನೀಡಿದೆ. GST ದರಗಳ ತರ್ಕಬದ್ಧಗೊಳಿಸುವಿಕೆಯನ್ನು GST ಮಂಡಳಿ ಅನುಮೋದಿಸಿದೆ. ಶೇಕಡ 12 ಮತ್ತು ಶೇಕಡಾ 28 ದರಗಳನ್ನು ರದ್ದುಗೊಳಿಸಲು ಮಂಡಳಿ ಅನುಮೋದನೆ ನೀಡಿದೆ.

Ad Widget ... ..

ಷಾರಾಮಿ ಸರಕುಗಳಿಗೆ ಶೇಕಡಾ 40 ರ ಹೊಸ ಸ್ಲ್ಯಾಬ್ ಅನ್ನು ಕೌನ್ಸಿಲ್ ಅನುಮೋದಿಸಿದೆ. GST ಮಂಡಳಿಯ ನಿರ್ಧಾರವು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ:

Ad Widget

ದೆಹಲಿಯಲ್ಲಿ 56 ನೇ GST ಕೌನ್ಸಿಲ್ ಸಭೆಯ ನಂತರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ನಾವು ಸ್ಲ್ಯಾಬ್‌ಗಳನ್ನು ಕಡಿಮೆ ಮಾಡಿದ್ದೇವೆ. ಕೇವಲ ಎರಡು ಸ್ಲ್ಯಾಬ್‌ಗಳು ಮಾತ್ರ ಇರುತ್ತವೆ ಮತ್ತು ನಾವು ಪರಿಹಾರ ಸೆಸ್‌ನ ಸಮಸ್ಯೆಗಳನ್ನು ಸಹ ಪರಿಹರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಸಲ್ಲಿಕೆಯಾಗಿರುವ ಪ್ರಸ್ತಾವದಂತೆ ಶೇ 28ರ ತೆರಿಗೆಯನ್ನು ಶೇ 18ಕ್ಕೆ ಇಳಿಸಲು ಸಚಿವರ ಸಮಿತಿ ಒಪ್ಪಿಗೆ ಸೂಚಿಸಿದೆ. ಹಾಗೆಯೇ ಶೇ 18ರ ತೆರಿಗೆ ಸ್ಲಾಬ್‌ ಶೇ 12ಕ್ಕೆ ಇಳಿಯಲಿವೆ. ಶೇ 12ರದ್ದು ಶೇ 5ಕ್ಕೆ ಕ್ರಮವಾಗಿ ಇಳಿಕೆಯಾಗುವ ಸಾಧ್ಯತೆಗಳಿವೆ. 1200 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್‌ ಹೊಂದಿರುವ ಸಣ್ಣ ಕಾರುಗಳು, 350 ಸಿಸಿ ಒಳಗಿನ ಮೋಟಾರ್‌ಸೈಕಲ್‌ಗಳು ಮತ್ತು ಬಿಡಿಭಾಗಗಳ ಮೇಲಿನ ತೆರಿಗೆ ಶೇ 28ರಿಂದ ಶೇ 18ಕ್ಕೆ ಇಳಿಕೆಯಾಗಲಿದೆ.

ಹೋಟೆಲ್ ಮತ್ತು ಮನರಂಜನಾ ಕ್ಷೇತ್ರದಲ್ಲಿ ಈವರೆಗೂ ಇದ್ದ ಶೇ 12ರಷ್ಟು ತೆರಿಗೆಯು ಶೇ 5ಕ್ಕೆ ಇಳಿಕೆ; ಕ್ಯಾನ್ಸರ್ ಔಷಧ ಮೇಲಿನ ಜಿಎಸ್‌ಟಿ ರದ್ದು; ಔಷಧ ಮತ್ತು ಇತರ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಶೇ 12ರಿಂದ ಶೇ 5; ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಗೆ ತೆರಿಗೆ ವಿನಾಯ್ತಿ ಸಿಗಲಿದೆ.

ದಿನನಿತ್ಯ ಬಳಸುವ ವಸ್ತುಗಳಾದ ಪನ್ನೀರ್, ಪಿಟ್ಜಾ ಬ್ರೆಡ್‌, ಖಾಕ್ರ, ಹಣ್ಣಿನ ರಸ, ಎಳನೀರು, ಮಜ್ಜಿಗೆ, ಚೀಸ್, ಪಾಸ್ತಾ ಮತ್ತು ಐಸ್‌ ಕ್ರೀಂ ಅಗ್ಗವಾಗಲಿದೆ. ಇವುಗಳ ಮೇಲಿನ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಸುವ ಸಾಧ್ಯತೆಗಳಿವೆ.

ಜವಳಿ ಕ್ಷೇತ್ರದಲ್ಲಿ ಸಿಂಥೆಟಿಕ್ ಯಾರ್ನ್, ಕೈಮಗ್ಗದ ನಾರಿನ ನೂಲು, ಕರಕುಶಲ ವಸ್ತುಗಳ ಮೇಲಿನ ತೆರಿಗೆ ಶೇ 12ರಿಂದ 5ಕ್ಕೆ ಇಳಿಕೆಯಾಗಲಿದ್ದು, ಸೌರಶಕ್ತಿಯ ಕುಕ್ಕರ್‌ ಮೇಲಿನ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ. ಸ್ಟೇಷನರಿ ವಿಭಾಗದಲ್ಲಿ ಪೇಪರ್‌ ಮೇಲಿನ ಬರಹ ಅಳಿಸುವ ಎರೇಸರ್‌ಗೆ ಈ ಮೊದಲು ಶೇ 12ರಷ್ಟು ತೆರಿಗೆ ಇತ್ತು. ಅದನ್ನು ಕೈಬಿಡುವ ಸಾಧ್ಯತೆಗಳಿವೆ. ಭೂಪಟ, ಚಾರ್ಟ್‌ಗಳು, ನೋಟ್‌ಪುಸ್ತಕ, ಅಟ್ಲಾಸ್‌ ಮೇಲಿನ ಜಿಎಸ್‌ಟಿ ಶೇ 12ರಿಂದ 5ಕ್ಕೆ ಇಳಿಯಲಿದೆ. ಛತ್ರಿ ಮೇಲಿನ ತೆರಿಗೆ ಶೇ 5ಕ್ಕೆ ಇಳಿಕೆಯಾಗಲಿದೆ.

₹7,500 ಒಳಗಿನ ಹೋಟೆಲ್ ಕೊಠಡಿಗಳ ಬಾಡಿಗೆ ಮೇಲಿನ ತೆರಿಗೆಯು ಶೇ 12ರಿಂದ ಶೇ 5ಕ್ಕೆ ಇಳಿಸಲು ಸಮಿತಿ ಪ್ರಸ್ತಾವ ಸಲ್ಲಿಸಿದೆ. ವಿಲಾಸಿ ಮತ್ತು ಹಾನಿಕಾರಕ ವಸ್ತುಗಳಲ್ಲಿ ತಂಬಾಕು, ಪಾನ್ ಮಸಾಲಾ ಮತ್ತು ವಿಲಾಸಿ ವಾಹನಗಳ ಮೇಲಿನ ತೆರಿಗೆ ಶೇ 40ರಲ್ಲೇ ಮುಂದುವರಿಯುವ ಸಾಧ್ಯತೆಗಳಿವೆ.

ಬ್ಯಾಟರಿ ಚಾಲಿತ (EV) ₹20 ಲಕ್ಷ ಮೇಲಿನ ವಾಹನಗಳ ಬೆಲೆ ಈಗಿರುವ ಶೇ 5ರ ಜಿಎಸ್‌ಟಿಯಿಂದ ಶೇ 18ಕ್ಕೆ ಏರಿಕೆಯಾಗಲಿದೆ. ₹40 ಲಕ್ಷ ಮೇಲಿನ ಇವಿ ವಾಹನಗಳಿಗೆ ಶೇ 40ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಕಲ್ಲಿದ್ದಲು ಮೇಲಿನ ಜಿಎಸ್‌ಟಿ ಶೇ 5ರಿಂದ ಶೇ 18ಕ್ಕೆ ಏರಿಕೆಯಾಗಲಿದೆ. ಇದು ವಿದ್ಯುತ್ ಶುಲ್ಕದ ಮೇಲೆ ಪರಿಣಾಮ ಬೀರಲಿದೆ. ₹2,500ಕ್ಕಿಂತ ಮೇಲಿನ ಪ್ರತಿ ಸಿದ್ಧ ಉಡುಪಿಗೆ ಈಗಿರುವ ಶೇ 12ರ ಜಿಎಸ್‌ಟಿಯನ್ನು ಶೇ 18ಕ್ಕೆ ಏರಿಸುವ ಪ್ರಸ್ತಾವವಿದೆ.

Leave a Comment

Your email address will not be published. Required fields are marked *