ಒಂದೆಡೆ ಧರ್ಮಸ್ಥಳಕ್ಕೆ ಜೈ, ಮತ್ತೊಂದೆಡೆ ಸೌಜನ್ಯ ಪರ, ಬಿಜೆಪಿಯವರ ನಿಲುವೇ ದ್ವಂದ್ವ ರಾಜಕೀಯ – ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವುದು ಧರ್ಮಯಾತ್ರೆ ಅಲ್ಲ, ರಾಜಕೀಯ ಯಾತ್ರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

. Ad Widget . Ad Widget . Ad Widget .

ವರದಿಗಾರರಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಈಗ ಧರ್ಮಸ್ಥಳ ಪ್ರಕರಣವನ್ನು ಈಗ ಎನ್. ಐ. ಎ ತನಿಖೆ ಮಾಡಿಸಿ ಎಂದು ಹೇಳುತ್ತಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಎಸ್.ಐ.ಟಿ ಅವರೂ ಪೊಲೀಸರು, ಎನ್‌.ಐ.ಎ ಅವರೂ ಪೊಲೀಸರು. ನಮ್ಮ ಪೊಲೀಸರ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲವೇ ? ಬಿಜೆಪಿ ಮೊದಲು ತನಿಖೆ ಮಾಡಿ ಎಂದು ಹೇಳಲೇ ಇಲ್ಲ. ಉತ್ಖನನ ಕಾರ್ಯ ನಡೆದ ಮೇಲೆ ಶವಗಳು ಪತ್ತೆಯಾಗದ ಮೇಲೆ ಒಬ್ಬೊಬ್ಬರೇ ಹೇಳಿಕೆ ನೀಡುವುದಕ್ಕೆ ಶುರು ಮಾಡಿದರು.

ಎಸ್‌.ಐ.ಟಿ ತನಿಖೆಯನ್ನು ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಹೆಗ್ಗಡೆ ಅವರ ಮೇಲೆಯೇ ಆರೋಪವಿದೆ. ಆದರೇ ಅವರೇ ಎಸ್.‌ಐ.ಟಿ ತನಿಖೆಯನ್ನು ಸ್ವಾಗತ ಮಾಡಿದ್ದಾರೆ. ನಾವು ತನಿಖೆ ಮಾಡಿಸುತ್ತಿದ್ದೇವೆ. ತನಿಖೆಯ ಮಧ್ಯದಲ್ಲಿ ನಾವು ಯಾರೂ ಮಧ್ಯ ಪ್ರವೇಶಿಸಿಲ್ಲ ಎಂದು ಹೇಳಿದ್ದಾರೆ.

ವಿದೇಶದಿಂದ ಫಂಡಿಂಗ್ ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ದುಡ್ಡು ಬಂದಿರುವುದು ಬಿಜೆಪಿಗೆ. ಇಷ್ಟೆಲ್ಲಾ ಮಾಡುತ್ತಿದ್ದಾರೆ ಎಂದರೇ ಅವರಿಗೆ ಎಲ್ಲಿಂದ ದುಡ್ಡು ಬರುತ್ತದೆ ? ಯಾರು ಇಷ್ಟೆಲ್ಲಾ ದುಡ್ಡು ಕೊಡುತ್ತಾರೆ ಇವರಿಗೆ ? ಎಂದು ಪ್ರಶ್ನಿಸಿದ್ದಲ್ಲದೇ, ಎಲ್ಲಾ ವಿಚಾರಗಳನ್ನು ರಾಜಕೀಯ ಮಾಡಬಾರದು. ವಿರೋಧ ಪಕ್ಷ ಟೀಕೆ ಮಾಡಲಿ. ಆದರೇ , ಇವರು ರಾಜಕೀಯಕ್ಕೆ ಮಾಡುತ್ತಿದ್ದಾರೆ ಎಂದಿದ್ದಾರೆ.

Leave a Comment

Your email address will not be published. Required fields are marked *