ಸಮಗ್ರ ನ್ಯೂಸ್: ಅಫ್ಘಾನಿಸ್ತಾನದ ಆಗ್ನೇಯ ಭಾಗದಲ್ಲಿ ಭಾನುವಾರ 6.0 ತೀವ್ರತೆಯ ಭೂಕಂಪ ಸಂಭವಿಸಿದ್ದು, 250 ಕ್ಕೂ ಹೆಚ್ಚು ಜೋರು ಸಾವನ್ನಪ್ಪಿದ್ದಾರೆ ಮತ್ತು 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದೇಶದ ಮಾಹಿತಿ ಸಚಿವಾಲಯ ವರದಿ ಮಾಡಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಭೂಕಂಪವು 00:47:41 IST ಕ್ಕೆ ಸಂಭವಿಸಿದೆ, ಇದರ ಕೇಂದ್ರಬಿಂದು ಅಕ್ಷಾಂಶ 34.50N ಮತ್ತು ರೇಖಾಂಶ 70.81E ನಲ್ಲಿ 160 ಕಿ.ಮೀ ಆಳದಲ್ಲಿ ಪತ್ತೆ ಮಾಡಲಾಗಿದೆ. ನಂಗರ್ಹಾರ್ ಸಾರ್ವಜನಿಕ ಆರೋಗ್ಯ ಇಲಾಖೆಯ ವಕ್ತಾರ ನಕಿಬುಲ್ಲಾ ರಹೀಮಿ ಘಟನೆಯಲ್ಲಿ ಕನಿಷ್ಠ 250ಕ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿ-ಎನ್‌ಸಿಆರ್ ಸೇರಿದಂತೆ ಪಾಕಿಸ್ತಾನ ಮತ್ತು ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವವಾಗಿದೆ. ಅಲ್ಲಿನ ನಿವಾಸಿಗಳು ಬಲವಾದ ಕಂಪನಗಳನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ. ಕಂಪನದ ಸಂದರ್ಭ ಕಟ್ಟಡಗಳು ನಡುಗಿದ್ದು, ಭಯಭೀರತಾದ ಜನರು ತಮ್ಮ ನಿವಾಸಗಳಿಂದ ಹೊರಗೆ ಓಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪದ ನಂತರ ಇತರ ಪ್ರದೇಶಗಳಲ್ಲಿ ರಿಕ್ಟರ್ ಮಾಪಕದಲ್ಲಿ 4.7, 4.3, 5.0 ತೀವ್ರತೆಯ ಹಲವಾರು ಕಂಪನಗಳು ಸಂಭವಿಸಿವೆ. ಈ ಎಲ್ಲಾ ಕಂಪನಗಳನ್ನು ಆಳವಿಲ್ಲದ ಅಥವಾ ಮಧ್ಯಂತರ ಭೂಕಂಪಗಳು ಎಂದು ವರ್ಗೀಕರಿಸಲಾಗಿದೆ. ಆಳವಿಲ್ಲದ ಮತ್ತು ಮಧ್ಯಂತರ ಭೂಕಂಪಗಳು ಸಾಮಾನ್ಯವಾಗಿ ಆಳವಾದ ಭೂಕಂಪಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ







