ಸಮಗ್ರ ನ್ಯೂಸ್: ಮುಸ್ಲಿಂ ವಿದ್ಯಾರ್ಥಿಗಳಿಗೆ ಓಣಂ ಆಚರಣೆಯಲ್ಲಿ ಭಾಗವಹಿಸದಂತೆ ಒತ್ತಾಯಿಸಿದ ಆರೋಪದ ಮೇಲೆ ಶಾಲಾ ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸಿದ್ದಲ್ಲದೇ ಪೊಲೀಸರು ದೂರು ದಾಖಲಿಸಿಕೊಂಡ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ.
ತ್ರಿಶೂರ್‌ನ ಕಡವಲ್ಲೂರಿನ ಸಿರಾಜುಲ್ ಉಲೂಮ್ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ಈ ಘಟನೆ ವರದಿಯಾಗಿದೆ. ಅಲ್ಲಿನ ಖದೀಜಾ ಎಂದು ಗುರುತಿಸಲಾದ ಶಿಕ್ಷಕಿ ತನ್ನ ವಿದ್ಯಾರ್ಥಿಗಳ ಪೋಷಕರಿಗೆ ವಾಯ್ಸ್ ನೋಟ್ ಅನ್ನು ಕಳುಹಿಸಿ ಮಕ್ಕಳಿಗೆ ಓಣಂ ಆಚರಣೆಯಲ್ಲಿ ಪಾಲ್ಗೊಳ್ಳದಂತೆ ಒತ್ತಾಯಿಸಿರುವುದಾಗಿ ಆರೋಪಿಸಲಾಗಿದೆ.
ಆಡಿಯೋ ಸಂದೇಶದಲ್ಲಿ ಶಿಕ್ಷಕಿ, ನಾವು ಮುಸ್ಲಿಮರು ಇಸ್ಲಾಂ ಧರ್ಮವನ್ನು ಪಾಲಿಸಿಕೊಂಡು ಬದುಕಬೇಕು. ಓಣಂ ಆಚರಣೆಗಳು ಬಹುದೇವತಾವಾದಿಗಳು ಮತ್ತು ಅವುಗಳನ್ನು ಪ್ರೋತ್ಸಾಹಿಸಬಾರದು. ನಾವು ಅಥವಾ ನಮ್ಮ ಮಕ್ಕಳು ಓಣಂ ಆಚರಣೆಗಳನ್ನು ಯಾವುದೇ ರೀತಿಯಲ್ಲಿ ಪ್ರೋತ್ಸಾಹಿಸಬಾರದು. ಇತರ ಧರ್ಮಗಳ ಜನರ ಪದ್ಧತಿಗಳಲ್ಲಿ ಸೇರುವುದು ‘ಶಿರ್ಕ್’ ಆಗಿ ಬದಲಾಗಬಹುದು ಎಂದು ಆಕೆ ಹೇಳಿರುವುಸು ಕೇಳಿಸಿಕೊಂಡಿದೆ.
ಈ ವಿಚಾರ ವಿವಾದದ ತಿರುವು ಪಡೆಯುತ್ತಿದ್ದಂತೆ ಸಿರಾಜುಲ್ ಉಲೂಮ್ ಇಂಗ್ಲಿಷ್ ಪ್ರೌಢಶಾಲೆಯ ಆಡಳಿತ ಮಂಡಳಿಯು ಈ ವಿಷಯದ ಬಗ್ಗೆ ಪ್ರತ್ಯೇಕ ಆಡಿಯೋ ಸಂದೇಶಗಳನ್ನು ಪ್ರಸಾರ ಮಾಡಿದ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿರುವುದಾಗಿ ಘೋಷಿಸಿದೆ. ಈ ಹೇಳಿಕೆಗಳು ಶಿಕ್ಷಕರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಶಾಲೆಯ ನಿಲುವಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.







