ಸಮಗ್ರ ನ್ಯೂಸ್: ಜು.12 ರಂದು ಎಂಡಿ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆ ಆತನ ವಿರುದ್ಧ ಎಫ್ ಐ ಆರ್ ಕೂಡ ದಾಖಲಿಸಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಸಮೀರ್ ಪತ್ರವೊಂದನ್ನು ಬರೆದಿದ್ದು, ನಾನು ಧರ್ಮಸ್ಥಳ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದಾನೆ.
ವೈಯುಕ್ತಿಕ ಭದ್ರತೆಯ ದೃಷ್ಟಿಯಿಂದ ನನ್ನ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ಗೆ ಉತ್ತರ ನೀಡಲು ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಲು ಸಾದ್ಯವಿಲ್ಲ ಎಂದು ಬರೆದಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ಸಂಬಂಧಿಸಿದಂತೆ ಎಲ್ಲಾ ರೀತಿಯ ವಿಚಾರಣೆಗೆ ನಾನು ಸಿದ್ದ.. ಆದರೆ ಧರ್ಮಸ್ಥಳದ ಬದಲು ಬೇರೆ ಯಾವುದೇ ಠಾಣೆಯಲ್ಲಿ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ. ಅದೇ ಧರ್ಮಸ್ಥಳದಲ್ಲೇ ಹಾಜರಾಗಬೇಕು ಎಂದರೆ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಬೇಕು ಹಾಗೂ ವಿಡಿಯೋ ಸಂವಾದದ ಮೂಲಕ ವಿಚಾರಣೆಗೆ ಹಾಜರಾಗುವ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾನೆ.
ಧರ್ಮಸ್ಥಳದಲ್ಲಿ ಎಸ್ ಐ ಟಿ ಅಧಿಕಾರಿಗಳು ಉತ್ಖನನ ಮಾಡುವ ವೇಳೆ ಯುಟ್ಯೂಬರ್ ಕಂಟೆಂಟ್‌ಗಾಗಿ ಧರ್ಮಸ್ಥಳದಲ್ಲಿ ಹಲವು ಯುಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದಿದ್ದು, ಅವರು ನನ್ನ ಸ್ನೇಹಿತರಾಗಿದ್ದಾರೆ. ಇದೀಗ ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕೂಡ ಯುಟ್ಯೂಬ್ ಕಂಟೆಂಟ್ ಕುರಿತಾಗಿದೆ. ಈ ಹಿನ್ನೆಲೆಯಲ್ಲಿ ತನಗೂ ಜೀವ ಭಯವಿದೆ ಎಂದು ಹೇಳಿದ್ದಾರೆ.







