ಸಮಗ್ರ ನ್ಯೂಸ್: ಕಾರವಾರ ಶಾಸಕ ಸತೀಶ್ ಸೈಲ್ (Satish Sail) ನಿವಾಸದ ಮೇಲೆ ಬುಧವಾರ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದಾಶಿವಘಡದಲ್ಲಿರುವ ಅವರ ನಿವಾಸದ ಮೇಲೆ ಬುಧವಾರ ಮುಂಜಾನೆ ಏಕಾಏಕಿ ದಾಳಿ ನಡೆಸಲಾಗಿದೆ.
ಅಕ್ರಮ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಆರೋಪದಡಿಯಲ್ಲಿ ಜಾರಿ ನಿರ್ದೇಶಾನಲಯ ಈ ದಾಳಿ ನಡೆಸಿದೆಯೆನ್ನಲಾಗಿದೆ.
ಇದುವರೆಗೂ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ. ಶಾಸಕರ ನಿವಾಸದೊಳಗೆ ಹೊರಗಿನಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಖಾಸಗಿ ವಾಹನಗಳಲ್ಲಿ ಯಾವುದೇ ಸುಳಿವು ನೀಡದೇ ಧಿಡೀರನೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.







