ಕಾರವಾರ ಶಾಸಕ ಸತೀಶ್ ಸೈಲ್ ಗೆ ಇಡಿ ಶಾಕ್| ಬೆಳ್ಳಂಬೆಳಗ್ಗೆ ನಿವಾಸದ ಮೇಲೆ ದಾಳಿ

ಸಮಗ್ರ ನ್ಯೂಸ್: ಕಾರವಾರ ಶಾಸಕ ಸತೀಶ್‌ ಸೈಲ್‌ (Satish Sail) ನಿವಾಸದ ಮೇಲೆ ಬುಧವಾರ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದಾಶಿವಘಡದಲ್ಲಿರುವ ಅವರ ನಿವಾಸದ ಮೇಲೆ ಬುಧವಾರ ಮುಂಜಾನೆ ಏಕಾಏಕಿ ದಾಳಿ ನಡೆಸಲಾಗಿದೆ.

Ad Widget ... .. Ad Widget .

ಅಕ್ರಮ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಆರೋಪದಡಿಯಲ್ಲಿ ಜಾರಿ ನಿರ್ದೇಶಾನಲಯ ಈ ದಾಳಿ ನಡೆಸಿದೆಯೆನ್ನಲಾಗಿದೆ.

Ad Widget

ಇದುವರೆಗೂ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ. ಶಾಸಕರ ನಿವಾಸದೊಳಗೆ ಹೊರಗಿನಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಖಾಸಗಿ ವಾಹನಗಳಲ್ಲಿ ಯಾವುದೇ ಸುಳಿವು ನೀಡದೇ ಧಿಡೀರನೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Leave a Comment

Your email address will not be published. Required fields are marked *