ಧರ್ಮಸ್ಥಳ ಪ್ರಕರಣಗಳ‌ ತನಿಖೆಯನ್ನು ಎನ್ಐಎ‌ಗೆ ವಹಿಸಲು ರಾಜ್ಯಸಭಾ ಸದಸ್ಯರಿಂದ ಅಮಿತ್ ಷಾಗೆ‌ ಪತ್ರ

ಸಮಗ್ರ ನ್ಯೂಸ್: ರಾಜ್ಯದ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ದಶಕಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿರುವ ಸರಣಿ ಅಪರಾಧಗಳು, ಅದರಲ್ಲೂ ಮುಖ್ಯವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ (ಎನ್ಐಎ) ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿ ರಾಜ್ಯಸಭಾ ಸದಸ್ಯ ಹಾಗೂ ಸಿಪಿಐ ನಾಯಕ ಪಿ. ಸಂದೋಷ್ ಕುಮಾರ್
ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಗಂಭೀರ ಸ್ವರೂಪದ ಪತ್ರ ಬರೆದಿದ್ದಾರೆ.

Ad Widget ... ..

500ಕ್ಕೂ ಹೆಚ್ಚು ಶವಗಳನ್ನು ತಾನೇ ವಿಲೇವಾರಿ ಮಾಡಿರುವುದಾಗಿ ದೇವಾಲಯದ ಮಾಜಿ ನೌಕರನೊಬ್ಬ ನೀಡಿದ್ದಾನೆ ಎನ್ನಲಾದ ಸ್ಫೋಟಕ ತಪ್ಪೊಪ್ಪಿಗೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದಶಕಗಳಿಂದ ನಡೆಯುತ್ತಿರುವ ಈ ಘಟನೆಗಳು ಸಾಮಾನ್ಯ ಪ್ರಕರಣಗಳಲ್ಲ, ಬದಲಿಗೆ ಇದೊಂದು ವ್ಯವಸ್ಥಿತ ಸಂಚು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

Ad Widget

ಪತ್ರದಲ್ಲಿ ಉಲ್ಲೇಖಿಸಲಾದ ಪ್ರಮುಖ ಪ್ರಕರಣಗಳು:
ಮನವಿಯಲ್ಲಿ ನಾಲ್ಕು ದಶಕಗಳ ಅವಧಿಯಲ್ಲಿ ನಡೆದ ಹಲವು ಆಘಾತಕಾರಿ ಪ್ರಕರಣಗಳನ್ನು ಉಲ್ಲೇಖಿಸಿ, ಇವುಗಳ ನಡುವಿನ ವ್ಯವಸ್ಥಿತ ಸಂಬಂಧದ ಬಗ್ಗೆ ಗಮನ ಸೆಳೆಯಲಾಗಿದೆ.

  • ವೇದವಲ್ಲಿ (1979): ಕಾನೂನುಬದ್ಧವಾಗಿ ಬಡ್ತಿ ಪಡೆದಿದ್ದ ಶಾಲಾ ಶಿಕ್ಷಕಿಯನ್ನು ಸ್ನಾನಗೃಹದಲ್ಲಿ ಜೀವಂತವಾಗಿ ಸುಟ್ಟುಹಾಕಿದ ಘಟನೆ.
  • ಪದ್ಮಲತಾ (1986): ಸ್ಥಳೀಯ ಕಮ್ಯುನಿಸ್ಟ್ ನಾಯಕರ ಮಗಳಾಗಿದ್ದ ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ, ನೇತ್ರಾವತಿ ನದಿಯಲ್ಲಿ ಬೆತ್ತಲೆಯಾಗಿ ಶವವಾಗಿ ಎಸೆಯಲಾಗಿತ್ತು.
  • ಅನನ್ಯಾ ಭಟ್ (2004): ಧರ್ಮಸ್ಥಳಕ್ಕೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿನಿ ನಾಪತ್ತೆ. ತನಿಖೆಗೆ ಯತ್ನಿಸಿದ ಸಿಬಿಐ ಉದ್ಯೋಗಿಯಾಗಿದ್ದ ಆಕೆಯ ತಾಯಿಯ ಮೇಲೆ ಹಲ್ಲೆ ನಡೆದು ಕೋಮಾಗೆ ಜಾರಿದ್ದರು. ಈ ಪ್ರಕರಣದಲ್ಲಿ ಎಫ್ಐಆರ್ ಕೂಡ ದಾಖಲಾಗಿಲ್ಲ.
  • ನಾರಾಯಣ ಮತ್ತು ಯಮುನಾ (2012): ಜಮೀನು ಬಿಟ್ಟುಕೊಡಲು ನಿರಾಕರಿಸಿದ ಅಣ್ಣ-ತಂಗಿಯನ್ನು ಬರ್ಬರವಾಗಿ ಕೊಲೆ ಮಾಡಿ, ಅವರ ಮನೆಯನ್ನು ಕೆಡವಿ ವಾಣಿಜ್ಯ ಕಟ್ಟಡ ನಿರ್ಮಿಸಿದ ಆರೋಪ.
  • ಸೌಜನ್ಯ (2012): 17 ವರ್ಷದ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ಮಾನಸಿಕ ಅಸ್ವಸ್ಥನ ಮೇಲೆ ಆರೋಪ ಹೊರಿಸಿ, ವರ್ಷಗಳ ನಂತರ ಆತ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಪ್ರಕರಣದ ಹಲವು ಸಾಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ್ದರು.

Leave a Comment

Your email address will not be published. Required fields are marked *