ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ| ಮಂಗಳೂರು, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ಮುನ್ಸೂಚನೆಯಂತೆ ಮಂಗಳೂರು ತಾಲೂಕಿನಾದ್ಯಂತ ವ್ಯಾಪಕ ಮಳೆ ಮುಂದುವರಿದಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ತಾಲೂಕಿನ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12 ನೇ ತರಗತಿವರೆಗೆ) ಜು.19ರ ಶನಿವಾರ ರಜೆ ಘೋಷಿಸಿ ಮಂಗಳೂರು ತಹಶೀಲ್ದಾರ್‌ ಆದೇಶಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget .

ಮಂಗಳೂರು ತಾಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಸುರತ್ಕಲ್ ಮುಕ್ಕ ನಂದಿನಿ ನದಿ ಸೇತುವೆಯವರೆಗೆ ಹಾಗೂ ಪೂರ್ವದಲ್ಲಿ ವಳಚ್ಚಿಲ್, ಅಡ್ಡೂರು ಸೇತುವೆ, ಎಡಪದವು, ಬಜಪೆ ಎಕ್ಕಾರು ವರೆಗೆ ಎಂದು ತಿಳಿಸಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜು.19ರ ಶನಿವಾರ ರಜೆ ಘೋಷಿಸಿ ಬಂಟ್ವಾಳ ತಹಶೀಲ್ದಾರ್‌ ಆದೇಶಿಸಿದ್ದಾರೆ.

Leave a Comment

Your email address will not be published. Required fields are marked *