ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭ

ಸಮಗ್ರ ನ್ಯೂಸ್‌: ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭವಾಗಲಿದೆ. ಈ ರಥಯಾತ್ರೆಯಲ್ಲಿ ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ. ಗಂಟೆ, ಶಂಖಗಳು ಮತ್ತು ‘ಜೈ ಜಗನ್ನಾಥ’ ಮಂತ್ರಗಳ ನಡುವೆ ರಥಗಳು ಚಲಿಸುಲಿದ್ದು, ಪುರಿಯ ವಾತಾವರಣವು ಅದ್ಭುತ ಮತ್ತು ದೈವಿಕ ಶಕ್ತಿಯಿಂದ ತುಂಬಿರಲಿದೆ.

Ad Widget ... ..

ಈ ಐತಿಹಾಸಿಕ ಉತ್ಸವವನ್ನು ವೀಕ್ಷಿಸಲು ಈಗಾಗಲೇ ಲಕ್ಷಾಂತರ ಭಕ್ತರು ಪುರಿಯನ್ನು ತಲುಪಿದ್ದಾರೆ. ರಥಯಾತ್ರೆ 9 ದಿನಗಳವರೆಗೆ ಇರಲಿದೆ. ಪುರಿಯ ರಥಯಾತ್ರೆಯನ್ನು ಧರ್ಮ, ಸಂಸ್ಕೃತಿ ಮತ್ತು ಸಾಮರಸ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು, ಶ್ರೀಕೃಷ್ಣ (ಜಗನ್ನಾಥ), ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ತಮ್ಮ ಚಿಕ್ಕಮ್ಮನ ಮನೆಯಾದ ಗುಂಡಿಚಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಗವಂತನ ರಥದ ಹಗ್ಗವನ್ನು ಎಳೆಯುವ ಅಥವಾ ಅದನ್ನು ಮುಟ್ಟುವ ಯಾವುದೇ ಭಕ್ತನು ಪುಣ್ಯ ಮತ್ತು ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

Ad Widget

Leave a Comment

Your email address will not be published. Required fields are marked *