ಮಂಗಳೂರು: ಅಪಾರ್ಟ್ಮೆಂಟ್ ನಿಂದ ಬಿದ್ದು ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಂಗಳೂರು ಬಳಿಯ ಕುತ್ತಾರಿನಲ್ಲಿ ನಡೆದಿದೆ. ಕುತ್ತಾರು ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ. ಕಟ್ಟಡದಿಂದ ಬಿದ್ದು ವೈದ್ಯ ದಂಪತಿಯ ಪುತ್ರಿ ಹಿಬಾ ಐಮನ್ (15) ಸಾವನ್ನಪ್ಪಿದ್ದಾಳೆ.

Ad Widget ... ..

ನಿನ್ನೆ ರಾತ್ರಿ ಬಟ್ಟೆ ಒಣಗಿಸಲೆಂದು ಹೋಗಿದ್ದ ಹಿಬಾ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ವೈದ್ಯ ದಂಪತಿ ಡಾ.ಮುಮ್ತಾಜ್ ಅಹ್ಮದ್ ದಂಪತಿ ಅಪಾರ್ಟ್ ಮೆಂಟ್ ನ 12ನೇ ಮಹಡಿಯಲ್ಲಿ ವಾಸವಾಗಿದ್ದರು. ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

18ನೇ ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12 ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ರಾತ್ರಿ ವೈದ್ಯ ದಂಪತಿಗಳಿಬ್ಬರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸುತಿದ್ದು, ಹಿಬಾ ಬಾಲ್ಕನಿಯಲ್ಲಿ ಸ್ಟೂಲ್ ಇಟ್ಟು ಬೆಡ್ ಶೀಟ್ ಒಣಗಿಸಲು ಯತ್ನಿಸುತ್ತಿದ್ದಾಗ ಮೇಲಿಂದ ಕೆಳ ಬಿದ್ದು ಸಾವನ್ನಪ್ಪಿದ್ದಾಳೆ.

Leave a Comment

Your email address will not be published. Required fields are marked *