ವಿಜಯಪುರ:ರಾಜ್ಯದ ಇತಿಹಾಸದಲ್ಲೇ ಮಹಾ ದರೋಡೆ| ಮನಗೋಳಿ ಕೆನರಾ ಬ್ಯಾಂಕ್ ಶಾಖೆಯಿಂದ 58 ಕೆ.ಜಿ ಚಿನ್ನಾಭರಣ ಕಳವು

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ‌‌ ಮನಗೋಳಿ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದ ಕಳ್ಳತನ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಸಿನಿಮೀಯ ರೀತಿಯಲ್ಲಿ, ಮಾಸ್ಟರ್ ಪ್ಲ್ಯಾನ್ ಮಾಡಿ ಕಳ್ಳರು ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ.

Ad Widget . Ad Widget . Ad Widget .

ಕದೀಮರ ಪತ್ತೆಗೆ ಪೊಲೀಸ್​ ಇಲಾಖೆ ಎಂಟು ವಿಶೇಷ ತಂಡಗಳು ರಚಿಸಿದೆ. ಬ್ಯಾಂಕ್​ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನವಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

Ad Widget . Ad Widget .

ಕಳೆದ ಮೇ 25 ರಂದು ವಿಜಯಪುರ ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ನಲ್ಲಿ ಕಳ್ಳತನವಾಗಿತ್ತು. ಬ್ಯಾಂಕ್​ನಲ್ಲಿ ಕಳ್ಳತನವಾದ ಸುದ್ದಿ ತಿಳಿದು ಮನಗೂಳಿ ಪೊಲೀಸರು ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರೆ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ನಂತರ ಬ್ಯಾಂಕ್ ಹಿರಿಯ ಆಧಿಕಾರಿಗಳು ಸ್ಥಳಕ್ಕೆ ತೆರಳಿ ಕಳ್ಳತನವಾದ ನಗದು ಚಿನ್ನಾಭರಣಗಳ ಅಂಕಿ ಅಂಶಗಳ ಲೆಕ್ಕ ಹಾಕಿದರು. ಬ್ಯಾಂಕ್​ನಲ್ಲಿ ಅಡವಿಟ್ಟ ಹಾಗೂ ಸುರಕ್ಷಣೆಗೆ ಇಟ್ಟಿದ್ದ 58 ಕೆಜಿ 975.94 ಗ್ರಾಂ ಚಿನ್ನಾಭರಣಗಳು ಹಾಗೂ 5.20 ಲಕ್ಷ ನಗದು ಕಳ್ಳತನವಾಗಿರುವುದು ಗೊತ್ತಾಗಿದೆ. ಚಿನ್ನದ ಅಂದಾಜು ಮೌಲ್ಯ 53 ಕೋಟಿ 26ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳ್ಳರ ಪತ್ತೆಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

Leave a Comment

Your email address will not be published. Required fields are marked *