ಬೆಳ್ತಂಗಡಿ: ಐದು ತಿಂಗಳ‌ ಹಸುಗೂಸು ಕಾಡೊಳಗೆ ಅನಾಥವಾಗಿ ಪತ್ತೆ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಬೆಳಾಲು ಕೊಡೋಳುಕೆರೆ ಎಂಬಲ್ಲಿ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕಾಡಿನ ಮಧ್ಯೆ ಬಿಟ್ಟು ಹೋದ ಘಟನೆ ಶನಿವಾರ (ಮಾ.22) ಬೆಳಗ್ಗೆ ಕಂಡುಬಂದಿದೆ.

Ad Widget ... ..

ಬೆಳಾಲು ಗ್ರಾ.ಪಂ. ವ್ಯಾಪ್ತಿಯ ಮುಂಡ್ರೊಟ್ಟು ರಸ್ತೆಯ ಕೊಡೋಳುಕೆರೆ ಕಾಡಿನಲ್ಲಿ ಮಗುವೊಂದು ಅಳುವ ಶಬ್ಧ ದಾರಿಹೋಕ ಮಹಿಳೆಗೆ ಕೇಳಿದ್ದು, ತಕ್ಷಣ ಅವರು ಮಗುವನ್ನು ಕಂಡು ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆ.

Ad Widget

ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಮತ್ತು ಆರೋಗ್ಯ ಇಲಾಖೆ ದೌಡಾಯಿಸಿದ್ದು, ಮಹಿಳಾ ಮತ್ತು ಮಕ್ಕಳ ಇಲಾಖಾ ಬರುವಿಕೆಗಾಗಿ ಕಾಯುತ್ತಿದ್ದಾರೆ. ಈ ವಿಚಾರವಾಗಿ ಮುಂದೆ ಮಗುವನ್ನು ಸೂಕ್ತ ಚಿಕಿತ್ಸೆ ಒದಗಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

Leave a Comment

Your email address will not be published. Required fields are marked *