ಜಿಮ್ಸ್ ಆಸ್ಪತ್ರೆ ವೈದ್ಯರ ಎಡವಟ್ಟು| ಬಾಣಂತಿ ಹೊಟ್ಟೆಯಲ್ಲಿ ಸಿಕ್ತು ಹತ್ತಿ, ಬಟ್ಟೆ ಉಂಡೆ

ಸಮಗ್ರ ನ್ಯೂಸ್: ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಸಿಸೇರಿಯನ್‌ ಮಾಡುವ ವೇಳೆ ಹೊಟ್ಟೆಯಲ್ಲೇ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

Ad Widget ... ..

ಕಳೆದ ಫೆ. 5ರಂದು ಭಾಗ್ಯಶ್ರೀ ಎಂಬ ಮಹಿಳೆಗೆ ಸಿಸೇರಿಯನ್‌ ಆಗಿತ್ತು. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊಟೆಯಲ್ಲೇ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದಾರೆ. ತಕ್ಷಣಕ್ಕೆ ಇದು ಮಹಿಳೆಯ ಅರಿವಿಗೆ ಬಂದಿಲ್ಲ. ಒಂದು ವಾರದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ವೇಳೆ ಸ್ಕ್ಯಾನಿಂಗ್‌ಗೆ ಬಂದಾಗ ವೈದ್ಯರ ಯಡವಟ್ಟು ಬಯಲಾಗಿದೆ.

Ad Widget

ಬಳಿಕ ಅಫಜಲಪುರ ಕರಜಗಿ ಗ್ರಾಮದ ಪ್ರಾಥಮಿಕ ಕೇಂದ್ರಕ್ಕೆ ತೆರಳಿ ಮರು ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ ಬಟ್ಟೆ ಉಂಡೆ ಹಾಗು ಹತ್ತಿ ತೆಗೆದಿದ್ದಾರೆ. ಆದರೆ ಕುಟುಂಬಸ್ಥರ ಆರೋಪವನ್ನು ಜಿಮ್ಸ್ ವೈದ್ಯರು ತಳ್ಳಿಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಸರ್ಜನ್‌ ಡಾ. ಅಸ್ನಾ ಬೇಗ್, ಹೆರಿಗೆಯ ನಂತರ ಬ್ಲೀಡಿಂಗ್ ಸಲುವಾಗಿ ಪ್ಯಾಡ್ ಇಡಲಾಗಿದೆ. 2 ದಿನದ ನಂತರ ಮಹಿಳೆ ಬಂದು ಅದನ್ನ ತೆಗೆಸಿಕೊಳ್ಳಬೇಕಾಗಿತ್ತು. ಅವರು ಬಂದಿರಲಿಲ್ಲ. ಈಗ ಮಹಿಳೆಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *