ಜೆಸಿಬಿ‌ ಹರಿದು ಎರಡು ವರ್ಷದ ಮಗು ಸಾವು

ಸಮಗ್ರ ನ್ಯೂಸ್: ಜೆಸಿಬಿ ಹರಿದು ಆಟವಾಡುತ್ತಿದ್ದ 2 ವರ್ಷದ ಮಗು ದುರ್ಮರಣ ಹೊಂದಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿಯ ಸಿಟಿ ಲೇಔಟ್​ನಲ್ಲಿ ನಡೆದಿದೆ. ಥನವ್ ರೆಡ್ಡಿ ಮೃತ ಮಗು. ಜೆಸಿಬಿ ಚಾಲಕನ ಅತಿವೇಗ, ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ.

Ad Widget ... ..

ಮನೆ ಮುಂದೆ ಥನವ್ ರೆಡ್ಡಿ ಆಟವಾಡುತ್ತಿದ್ದ. ಈ ವೇಳೆ ಆತನ ಮೇಲೆ ಜೆಸಿಬಿ ಹರಿದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮಗುವನ್ನು ವೈದೇಹಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದು, ಆದರೆ ಮಾರ್ಗಮಧ್ಯೆಯೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದೇಹಿ ಆಸ್ಪತ್ರೆಯಲ್ಲಿ ಥನವ್ ರೆಡ್ಡಿ(2) ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

Ad Widget

ಆಂಧ್ರದ ಮದನಪಲ್ಲಿ ಮೂಲದ ದಂಪತಿಯ ಪುತ್ರ ಥವನ್. ಮದುವೆಯಾಗಿ 4 ವರ್ಷದ ನಂತರ ಹುಟ್ಟಿದ್ದ. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಥವನ್ ತಂದೆ, ಎರಡು ವರ್ಷದಿಂದ ಬಾಲಾಜಿ ಲೇಔಟ್​ನಲ್ಲಿ ವಾಸವಿದ್ದರು. ಇದೇ ಲೇಔಟ್​ನಲ್ಲಿ ಹೊಸ ಮನೆ ಕೂಡ ಕಟ್ಟಿಸುತ್ತಿದ್ದರು. ನಿನ್ನೆ ಸಂಜೆ ಮನೆ ಪಕ್ಕದಲ್ಲೇ ಜೆಸಿಬಿ ಕೆಲಸ ಮಾಡುತ್ತಿತ್ತು. ಕೆಲಸ ಮುಗಿದ ಬಳಿಕ ವೇಗವಾಗಿ ಚಾಲಕ ಜೆಸಿಬಿ ಚಲಾಯಿಸಿದ್ದ. ಈ ವೇಳೆ‌ ಮನೆ ಮುಂದೆ ಇದ್ದ ಮಗು ಜೆಸಿಬಿಗೆ ಸಿಲುಕಿದೆ. ಇನ್ನು ಮಗು ಸಿಲುಕಿರೋದೇ ಜೆಸಿಬಿ ಚಾಲಕನಿಗೆ ಗೊತ್ತೇ ಆಗಿಲ್ಲ. ಮಗು ಬಿದ್ದಿರೋದನ್ನ‌ ನೋಡಿ ಪೋಷಕರು ಕಿರುಚಿಕೊಂಡಿದ್ದಾರೆ. ಬಳಿಕ ಜೆಸಿಬಿ ಚಾಲಕನಿಗೆ ವಿಚಾರ ಗೊತ್ತಾಗಿ ಎಸ್ಕೇಪ್ ಆಗಿದ್ದಾನೆ.

Leave a Comment

Your email address will not be published. Required fields are marked *