ಚಾರ್ಮಾಡಿ ಘಾಟ್: ಕಾಳ್ಗಿಚ್ಚು ತಡೆಗೆ ಅರಣ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಳ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ನಿಯೋಜನೆ ಮಾಡಿದೆ. ಕೊಟ್ಟಿಗೆಹಾರ
ಅರಣ್ಯ ಇಲಾಖೆಯಲ್ಲಿ ಬೆಂಕಿ ವೀಕ್ಷಕರು ಇದ್ದಾರೆ.

Ad Widget ... ..

ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿ ಕಿಡಿಗೇಡುಗಳು ಹಚ್ಚುವ ಬೆಂಕಿಯಿಂದ ಉಂಟಾಗುತ್ತಿರುವ ಕಾಳ್ಗಿಚ್ಚು ತಡೆಯಲು ಸಾಧ್ಯವಾಗುತ್ತಿಲ್ಲ. ಬಿದರತಳ ಬಳಿ ಅರಣ್ಯದಲ್ಲಿ ಬೆಂಕಿ ಹರಡಿತ್ತು. ಅದಾದ ಒಂದೇ ವಾರದ ನಂತರ ಘಾಟಿಯಲ್ಲಿ ಅಣ್ಣಪ್ಪಸ್ವಾಮಿ ದೇಗುಲದ ಸಮೀಪ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಹುಲ್ಲುಗಾವಲು ಅಗ್ನಿಗೆ ಆಹುತಿಯಾಯಿತು.

Ad Widget

ಇದನ್ನು ತಪ್ಪಿಸಲು ಈಗ ಅರಣ್ಯ ಇಲಾಖೆಯಿಂದ ಆನೆ ಕಾರ್ಯಪಡೆ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿದೆ. ರಸ್ತೆ ಬದಿಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುವುದನ್ನು ತಡೆಯಲು, ರಸ್ತೆಯಲ್ಲಿ ವಾಹನ ನಿಲ್ಲಿಸಿದವರ ಮೇಲೆ ನಿಗಾ ಇಡುವ ಕೆಲಸವನ್ನು ಈ ಸಿಬ್ಬಂದಿ ಮಾಡಲಿದ್ದಾರೆ.

Leave a Comment

Your email address will not be published. Required fields are marked *