ಅಕ್ಕನ ಜೊತೆ ಜಗಳವಾಡಿದ ಬಾವನ ಕೈ ಕತ್ತರಿಸಿದ ಬಾಮೈದ

Ad Widget ... ..

ಮೈಸೂರು: ಗಂಡ ಹೆಂಡತಿ ನಡುವೆ ಗಲಾಟೆಯಾಗಿದ್ದ ಬಾಮೈದ ಬಾವನನ್ನೇ ಕೊಂದು ಹಾಕಿದ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಡೆದಿದೆ. ಮಹಮದ್ ಸರಾನ್ (27) ಕೊಲೆಯಾದವನು.

Ad Widget

ಕಳೆದ ಐದು ತಿಂಗಳ ಹಿಂದಷ್ಟೇ ಮಹಮ್ಮದ್ ಸರಾನ್ ಮತ್ತು ರೂಬೀನಾ ಎಂಬುವರನ್ನ ಮದುವೆಯಾಗಿದ್ದರು. ಇಬ್ಬರ ನಡುವೆ ಜಗಳ ಶುರುವಾಗಿತ್ತು. ಈ ಜಗಳದಲ್ಲಿ ಪತ್ನಿ ಕಡೆಯ ಸಂಬಂಧಿಕರು ಮಧ್ಯೆ ಪ್ರವೇಶಿಸಿದ್ದಾರೆ. ಜಗಳ ಅತಿರೇಕಕ್ಕೆ ಹೋಗಿದ್ದು ಪತ್ನಿಯ ಸಂಬಂಧಿಕರು ಪತಿ ಮಹಮದ್ ಸರಾನ್​ನ್ನು ಹತ್ಯೆಗೈದಿದ್ದಾರೆ. ಅಲ್ಲದೇ ಮಹಮದ್ ಸರಾನ್​ನ ಬಾಮೈದ ಕದೀರ್ ತನ್ನ ಬಾವನ ಕೈ ಕತ್ತರಿಸಿ ಪೊಲೀಸ್ ಠಾಣೆಗೆ ತಂದಿದ್ದಾನೆ. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

Leave a Comment

Your email address will not be published. Required fields are marked *