ಇಂದಿನಿಂದ ಕಬಡ್ಡಿ ಕಲರವ| ಪಿಕೆಎಲ್ 11ನೇ ಸೀಸನ್ ಆರಂಭ

ಸಮಗ್ರ ನ್ಯೂಸ್: ಐಪಿಎಲ್ ನಂತರ ಭಾರತದಲ್ಲಿ ಹೆಚ್ಚು ಅಭಿಮಾನಿಗಳ ಗಮನ ಸೆಳೆಯುವ ಕಬಡ್ಡಿ ಮತ್ತೆ ಮನರಂಜನೆ ನೀಡಲು ಸಿದ್ಧವಾಗಿದೆ. 10 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿರುವ ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್ ಇಂದಿನಿಂದ ಆರಂಭವಾಗಲಿದೆ.

Ad Widget ... ..

ಮೊದಲ ಲೀಗ್ ಪಂದ್ಯಗಳಿಗೆ ಹೈದರಾಬಾದ್​ ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್-ಬೆಂಗಳೂರು ಬುಲ್ಸ್ ಮುಖಾಮುಖಿಯಾಗಲಿವೆ. ರಾತ್ರಿ 8 ಗಂಟೆಗೆ 3 ತಿಂಗಳ ಟೂರ್ನಮೆಂಟ್​ಗೆ ಚಾಲನೆ ದೊರೆಯಲಿದೆ.

Ad Widget

ಈ ಬಾರಿ ಮೂರು ನಗರಗಳಲ್ಲಿ ಟೂರ್ನಮೆಂಟ್ ನಡೆಯಲಿದೆ. ಹೈದರಾಬಾದ್, ನೊಯ್ಡಾ ಹಾಗೂ ಪುಣೆಯಲ್ಲಿ ಲೀಗ್​ ಪಂದ್ಯಗಳು ನಡೆಯಲಿವೆ. ಹೈದರಾಬಾದ್​ನಲ್ಲಿ 8 ಪಂದ್ಯಗಳನ್ನಾಡಲಿದೆ. ನವೆಂಬರ್ 12ರಂದು ಜೈಪುರ್ ಪಿಂಕ್​ ಪ್ಯಾಂಥರ್ಸ್ ವಿರುದ್ಧ ನೋಯ್ಡಾ ಲೆಗ್​ ಆರಂಭಿಸಲಿದೆ. ಡಿಸೆಂಬರ್ 3ರಿಂದ ಪುಣೆ ಲೀಗ್ ಆರಂಭಿಸಲಿದೆ.

ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ ಹಾಟ್‌ಸ್ಟಾರ್ ಪ್ರೊಕಬಡ್ಡಿ ಲೀಗ್‌ನ ಅಧಿಕೃತ ಸ್ಟ್ರೀಮಿಂಗ್ ಹಕ್ಕು ಪಡೆದುಕೊಂಡಿದೆ. ಸ್ಟಾರ್ ಸ್ಪೋರ್ಟ್ಸ್-1, ಸ್ಟಾರ್ ಸ್ಪೋರ್ಟ್ಸ್-2 ಚಾನೆಲ್‌ಗಳಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಈ ಚಾನಲ್‌ಗಳಲ್ಲಿ ವೀಕ್ಷಿಸಬೇಕಾದರೆ ಚಂದದಾರರಾಗಿರಬೇಕು. ಆದರೆ ನೀವು OTT ಪ್ಲಾಟ್‌ಫಾರ್ಮ್ ಹಾಟ್‌ಸ್ಟಾರ್‌ನಲ್ಲಿ ಈ ಟೂರ್ನಮೆಂಟ್​ ಅನ್ನ ಉಚಿತವಾಗಿ ವೀಕ್ಷಿಸಬಹುದಾಗಿದೆ.

Leave a Comment

Your email address will not be published. Required fields are marked *