ಸಮಗ್ರ ನ್ಯೂಸ್: ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾಕ್ಕೆ ಇದೀಗ ಎಮರ್ಜೆನ್ಸಿಗೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಡ್ ಸರ್ಟಿಫಿಕೇಶನ್ ನ(ಸಿಬಿಎಫ್‌ಸಿ) ಸ್ಕಿನಿಂಗ್ ಸಮಿತಿಯು ಬಿಡುಗಡೆಗೆ ಮುನ್ನ ಮೂರು ಕಟ್ ಹಾಗೂ 10 ಬದಲಾವಣೆ ಮಾಡಬೇಕೆಂಬ ಷರತ್ತಿನ ಮೇಲೆ ‘ಯುಎ’ ಪ್ರಮಾಣೀಕರಣಕ್ಕೆ ಅನುಮೋದನೆ ನೀಡಿದೆ.
ಟ್ರೈಲರ್ ಬಿಡುಗಡೆಯಾದಗಿನಿಂದಲೂ ಹಲವು ವಿವಾದಗಳಲ್ಲಿ ಸಿಲುಕಿದ ಎಮರ್ಜೆನ್ಸಿ ಸಿನಿಮಾ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಡ್ ಸರ್ಟಿಫಿಕೇಶನ್ (CBFC)ನಿಂದ ಪ್ರಮಾಣೀಕರಣ ಸಿಗದ ಕಾರಣ ಸೆಪ್ಟೆಂಬರ್ 6ರಂದು ರಿಲೀಸ್ ಬಿಡುಗಡೆಯಾಗಿಲ್ಲ. ಸ್ಕ್ರೀನಿಂಗ್ ಸಮಿತಿಯು ಸಿನಿಮಾದಲ್ಲಿ ಮಾಡಬೇಕಾದ 10 ಬದಲಾವಣೆಗಳ ಪಟ್ಟಿಯನ್ನು ಕಳುಹಿಸಿದ್ದು, ಅವುಗಳಲ್ಲಿ ಹೆಚ್ಚಿನವು ಸಿಖ್ ಸಮುದಾಯದಿಂದ ಆಕ್ಷೇಪಿಸಲ್ಪಟ್ಟ ದೃಶ್ಯಗಳನ್ನು ಒಳಗೊಂಡಿವೆ.
ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಈ ಸಿನಿಮಾ ಆಧರಿಸಿದ್ದು, ಕಂಗನಾ ರಣಾವತ್ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಚಿತ್ರದಲ್ಲಿ ತೋರಿಸಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಸತ್ಯವನ್ನು ಪ್ರಸ್ತುತಪಡಿಸಲು ಸೆನ್ಸಾರ್ ಮಂಡಳಿ ಕೇಳಿದೆ. ವಾಸ್ತವವಾಗಿ ಸಿನಿಮಾದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ರಿಚರ್ಡ್ ಮಿಸ್ ನಿಕ್ಸನ್ ಅವರು ಭಾರತೀಯ ಮಹಿಳೆಯರ ಬಗ್ಗೆ ಮಾಡಿದ ಅವಹೇಳನಕಾರಿ ಹೇಳಿಕೆಗಳು ಮತ್ತು ಭಾರತೀಯರು ಮೊಲಗಳಂತೆ ಸಂತಾನೋತ್ಪತ್ತಿ ಮಾಡುವ ಮಾತುಗಳನ್ನು ಒಳಗೊಂಡಿದೆ. ಈ ಹೇಳಿಕೆಗಳ ಮೂಲವನ್ನು ಪ್ರಸ್ತುತಪಡಿಸುವಂತೆ ಸಿಬಿಎಫ್‌ಸಿ ಕೇಳಿದೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಮಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.







