ಶಿರಾಡಿ ಘಾಟ್: ವಾಹನ ಸಂಚಾರ ಪುನರಾರಂಭ

ಸಮಗ್ರ ನ್ಯೂಸ್: ಸತತವಾಗಿ ಸುರಿಯುತ್ತಿದ್ದ ಮಳೆಗೆ ನಿರಂತರ ಭೂ ಕುಸಿತ ಕಂಡಿದ್ದ ಶಿರಾಡಿ ಘಾಟ್‌ ಪ್ರದೇಶದ ಸಕಲೇಶಪುರ ತಾಲೂಕಿನ ಮಾರ್ನಳ್ಳಿ ದೊಡ್ಡತಪ್ಪುಲಿನಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Ad Widget ... ..

ಹೆದ್ದಾರಿ ಅಗಲಗೊಳಿಸುವ ಕಾಮಗಾರಿ ಕಾರಣಕ್ಕೆ ಕತ್ತರಿಸಲ್ಪಟ್ಟ ಗುಡ್ಡಗಳ ಭಾಗದಲ್ಲಿ ಭಾರೀ ಮಳೆಗೆ ಕೆಲವು ದಿನಗಳಿಂದ ಭಾರೀ ಭೂ ಕುಸಿತವಾಗಿತ್ತು. ಸರಕಾರಿ ಬಸ್‌ಗಳು ಮಾತ್ರ ಪರ್ಯಾಯ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದು, ಮಂಗಳೂರು – ಬೆಂಗಳೂರು ನಡುವೆ ನೇರ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ.

Ad Widget

Leave a Comment

Your email address will not be published. Required fields are marked *