Ad Widget .

ಸುವರ್ಣ ನ್ಯೂಸ್ ಗೆ ಮುಖಭಂಗ| ನಟಿ ರಮ್ಯ ನೀಡಿದ್ದ ಮಾನಹಾನಿ ಪ್ರಕರಣ ದಂಡದ ಮೊತ್ತ ಪಾವತಿಗೆ ಸುಪ್ರೀಂ ಸೂಚನೆ

ಸಮಗ್ರ ನ್ಯೂಸ್: ಕನ್ನಡದ ಏಷ್ಯಾನೆಟ್‌ ಸುವರ್ಣ ಸುದ್ದಿ ವಾಹಿನಿ ಮತ್ತದರ ಮಾತೃ ಸಂಸ್ಥೆ ಹಾಗೂ ವಾಹಿನಿಯ ಮಾಜಿ ಸಂಪಾದಕರಾಗಿದ್ದ ಪತ್ರಕರ್ತ ವಿಶ್ವೇಶ್ವರ ಭಟ್‌ ವಿರುದ್ಧ ನಟಿ ರಮ್ಯಾ (ದಿವ್ಯಸ್ಪಂದನ) ಮಾನಹಾನಿ ಪ್ರಕರಣ ದಾಖಲಿಸಿದ್ದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಬಗ್ಗೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​​, ರಮ್ಯಾ ಅವರಿಗೆ 50 ಲಕ್ಷ ಪರಿಹಾರದ ಕುರಿತು ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದು ಆದೇಶಿಸಿದೆ ಎಂದು ವರದಿಯಾಗಿದೆ.

Ad Widget . Ad Widget . Ad Widget .

ಏನಿದು ಪ್ರಕರಣ ?
ಸ್ಪಾಟ್‌ ಫಿಕ್ಸಿಂಗ್‌ & ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಸುದ್ದಿ ಬಿತ್ತರಿಸುವ ಮೂಲಕ ತನ್ನ ಘನತೆಗೆ ಹಾನಿ ಮಾಡಲಾಗಿದೆ. ಸುದ್ದಿ ಬಿತ್ತರಿಸುವಾಗ ಪದೇ-ಪದೇ ತಮ್ಮ ಚಿತ್ರ & ವಿಡಿಯೋ ಪ್ರಸಾರ ಮಾಡಲಾಗಿದೆ. ತಾನು ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂಬ ರೀತಿಯಲ್ಲೇ ಸುದ್ದಿಯಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದ ರಮ್ಯಾ ಅವರು, ಮೇ 31ರಂದು (2013) ಕೋರ್ಟ್ ಮೊರೆ ಹೋಗಿದ್ದರು.

ತಮ್ಮ ವಿರುದ್ಧದ ಈ ಮಾನನಷ್ಟ ಮೊಕದ್ದಮೆ ಕೇಸ್​​ ಅನ್ನು ರದ್ದು ಮಾಡುವಂತೆ ಕೋರಿ ಸುವರ್ಣ ಸುದ್ದಿವಾಹಿನಿ, ಅದರ ಮಾತೃ ಸಂಸ್ಥೆ ಹಾಗೂ ವಾಹಿನಿಯ ಅಂದಿನ ಸಂಪಾದಕ ವಿಶ್ವೇಶ್ವರ ಭಟ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಹಾಗೂ ಅದಕ್ಕೂ ಮೊದಲು ಮ್ಯಾಜಿಸ್ಟ್ರೇಟ್ ಕೊರ್ಟ್​ ವಜಾಗೊಳಿಸಿತ್ತು. ಬಳಿಕ ಈ ಪ್ರಕರಣ ಸುಪ್ರೀಂಕೋರ್ಟ್​​​​​​ಗೆ ಹೋಗಿದ್ದು, ಇದೀಗ ನ್ಯಾಯಾಲಯವು ಈ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *