ಮತ್ತೊಮ್ಮೆ ತೆರೆಯಲಿದೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ

ಸಮಗ್ರ ನ್ಯೂಸ್‌: ನಾಲ್ಕು ದಶಕಗಳ ನಂತರ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಜು.14ರಂದು ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ. ಆಭರಣ ಹಾಗೂ ಬೆಲೆಬಾಳುವ ಲೋಹಗಳಿರುವ ಈ ತಿಜೋರಿಯನ್ನು ಕೊನೆಯ ಬಾರಿಗೆ 1985ರಲ್ಲಿ ತೆರೆಯಲಾಗಿತ್ತು. ಮುಖ್ಯಮಂತ್ರಿ ಮೋಹನ್ ಮಾಝಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ರತ್ನಭಂಡಾರದಲ್ಲಿರುವ ಅಮೂಲ್ಯ ವಸ್ತುಗಳನ್ನು ದಾಸ್ತಾನು ಮಾಡಲಿದೆ.

Ad Widget ... ..

ಕಳೆದ ಬಾರಿ ತೆರೆಯಲಾದಾಗ ಭಂಡಾರದಲ್ಲಿ 12,500 ರತ್ನಖಚಿತ ಚಿನ್ನದ ಆಭರಣ ಹಾಗೂ 22,000 ತುಂಡು ಬೆಳ್ಳಿ ಇತ್ತು. 2018ರಲ್ಲಿ ಇದರ ತನಿಖೆ ನಡೆಸುವಂತೆ ನ್ಯಾಯಾಲಯ ಭಾರತದ ಪುರಾತತ್ವ ಇಲಾಖೆಗೆ ಆದೇಶಿಸಿದ್ದಾಗ ಭಂಡಾರದ ಬೀಗದಕೈ ಕಾಣೆಯಾಗಿತ್ತು.

Ad Widget

ಈ ರತ್ನಭಂಡಾರದಲ್ಲಿರುವ ಸಂಪತ್ತಿನಿಂದ ಇಡೀ ದೇಶಕ್ಕೆ ಎರಡು ವರ್ಷಗಳ ಕಾಲ ಉಚಿತ ಊಟ ಒದಗಿಸಬಹುದು ಎಂದು ಹೇಳಲಾಗಿದ್ದು, ಹಲವು ದೇಶಗಳ ಆರ್ಥಿಕತೆಯನ್ನು ವರ್ಷಗಳ ಕಾಲ ಸುಸ್ಥಿರಗೊಳಿಸಲೂ ಇದು ಸಮರ್ಥವಾಗಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *