ದರ್ಶನ್ ಮೇಲಿನ ಅಭಿಮಾನಕ್ಕೆ ಮಗನನ್ನೇ ಕೈದಿ ಮಾಡಿದ ಅಪ್ಪ

ಸಮಗ್ರ ನ್ಯೂಸ್: ನಟ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿ ಇದ್ದು, ದರ್ಶನ್ ಮೇಲಿನ ಮಿತಿಮೀರಿದ ಅಭಿಮಾನಕ್ಕೆ ಜನ ಏನು ಮಾಡಲು ರೆಡಿ ಇದ್ದಾರೆ. ಹೌದು ಇಲ್ಲೋಬ್ಬ ಹುಚ್ಚು ಅಭಿಮಾನಿ ತಾನು ಹೆತ್ತ ಮಗುವನ್ನೇ ಕೈದಿ ಮಾಡಿ ಹಾಕಿದ್ದಾನೆ. ಇದು ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್. ಮಗುವಿಗೆ ಪರಪ್ಪನ ಅಗ್ರಹಾರದ ಕೈದಿಯಂತೆ ಫೋಟೋ ಶೂಟ್ ಮಾಡಿಸಿದ್ದಾನೆ.

Ad Widget ... ..

ಒಂದು ವರ್ಷದ ಮಗುವಿಗೆ ಜೈಲು ಕೈದಿಯ ರೀತಿ ಬಿಳಿ ಬಟ್ಟೆ ಹಾಕಿಸಿ ಈತ ಫೋಟೋ ‌ಶೂಟ್ ಮಾಡಿಸಿದ್ದು, ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಮಗುವಿಗೆ ದರ್ಶನ್‌ಗೆ ಕೊಡಲಾದ ಕೈದಿ ನಂಬರ್ ನೀಡಿದ್ದಾನೆ. ಕೈ ಕೋಳದ ಮಾದರಿ, ಕೈದಿಗಳ ರೀತಿ ಬಿಳಿ ಬಟ್ಟೆ ಹಾಕಿಸಿದ್ದಾನೆ.

Ad Widget

ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಅಭಿಮಾನಿಗಳಿಂದ ನಿತ್ಯ ಒಂದೊಂದು ಹೊಸ ಟ್ರೆಂಡ್ ಸೃಷ್ಟಿಯಾಗುತ್ತಿದೆ. ದರ್ಶನ್‌ಗೆ ನೀಡಿರುವ ಕೈದಿ ನಂಬರ್ ಧರಿಸಿಕೊಂಡು ಒಬ್ಬಾತ ಫೋಟೋ ಶೂಟ್ ಮಾಡಿಸಿಕೊಂಡಿದ್ದ. ಇದೀಗ ಮಗುವಿಗೆ ಹೀಗೆ ಫೋಟೋ ಶೂಟ್ ಮಾಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *