ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿದ ಸಿಎಂ. ಯಾರ್ಯಾರಿಗೆ ಯಾವ ಜಿಲ್ಲೆ? ಇಲ್ಲಿದೆ ಫುಲ್ ಡೀಟೈಲ್…

ಬೆಂಗಳೂರು : ರಾಜ್ಯದ ನೂತನ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ, ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನು ವಹಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ನೆರೆ, ಪ್ರವಾಹ, ಕೊರೋನಾ 3ನೇ ಅಲೆಯ ನಿಯಂತ್ರಣ ಜವಾಬ್ದಾರಿಯನ್ನು ನೀಡಿದ್ದಾರೆ.

Ad Widget ... ..

ಇಂದಿನ ನೂತನ ಸಚಿವ ಸಂಪುಟದ ಮೊದಲ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೈಗೊಂಡ ತೀರ್ಮಾನಗಳ ಕುರಿತಂತೆ ಪಟ್ಟಿಯನ್ನು ಬಿಡುಗಡೆ ಮಾಡಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು, ಈ ಕೆಳಕಂಡ ಸಚಿವರುಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

Ad Widget

ಹೀಗಿದೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ

ಗೋವಿಂದ ಕಾರಜೋಳ – ಬೆಳಗಾವಿ
ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ
ಆರ್.ಅಶೋಕ್ – ಬೆಂಗಳೂರು ನಗರ
ಬಿ.ಶ್ರೀರಾಮುಲು – ಚಿತ್ರದುರ್ಗ
ವಿ.ಸೋಮಣ್ಣ – ರಾಯಚೂರು
ಉಮೇಶ್ ಕತ್ತಿ – ಬಾಗಲಕೋಟೆ
ಎಸ್ ಅಂಗಾರ – ದಕ್ಷಿಣ ಕನ್ನಡ
ಜೆಸಿ ಮಾಧುಸ್ವಾಮಿ – ತುಮಕೂರು
ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
ಡಾ.ಸಿಎನ್.ಅಶ್ವತ್ಥನಾರಾಯಣ – ರಾಮನಗರ
ಸಿಸಿ ಪಾಟೀಲ್ – ಗದಗ
ಆನಂದ್ ಸಿಂಗ್ – ವಿಜಯನಗರ ಮತ್ತು ಬಳ್ಳಾರಿ
ಕೋಟಾ ಶ್ರೀನಿವಾಸ ಪೂಜಾರಿ – ಕೊಡಗು
ಪ್ರಭು ಚೌಹಾಣ್ – ಬೀದರ್
ಮರುಗೇಶ್ ನಿರಾಣಿ – ಕಲಬುರ್ಗಿ
ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
ಎಸ್.ಟಿ.ಸೋಮಶೇಖರ್ – ಮೈಸೂರು ಮತ್ತು ಚಾಮರಾಜನಗರ
ಬಿ.ಸಿ ಪಾಟೀಲ್ – ಹಾವೇರಿ
ಬೈರತಿ ಬಸವರಾಜು – ದಾವಣಗೆರೆ
ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
ಕೆ.ಗೋಪಾಲಯ್ಯ – ಹಾಸನ
ಶಶಿಕಲಾ ಜೊಲ್ಲೆ – ವಿಜಯಪುರ
MTB ನಾಗರಾಜು – ಬೆಂಗಳೂರು ಗ್ರಾಮಾಂತರ
ಕೆಸಿ ನಾರಾಯಣ್ ಗೌಡ – ಮಂಡ್ಯ
ಬಿಸಿ ನಾಗೇಶ್ – ಯಾದಗಿರಿ
ಸುನೀಲ್ ಕುಮಾರ್ – ಉಡುಪಿ
ಹಾಲಪ್ಪ ಆಚಾರ್ – ಕೊಪ್ಪಳ
ಶಂಕರ್ ಪಾಟೀಲ್ ಮುನೇನಕೊಪ್ಪ – ಧಾರವಾಡ
ವಿ.ಮುನಿರತ್ನ – ಕೋಲಾರ

Leave a Comment

Your email address will not be published. Required fields are marked *