ಸಮಗ್ರ ನ್ಯೂಸ್: ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ 30 ಮಂಗಗಳನ್ನು ಹತ್ಯೆಗೈದ ಅಮಾನವೀಯ ಕೃತ್ಯ ಚಿಕ್ಕಮಗಳೂರಿನ ಎನ್ಆರ್ಪುರದ ಬಳಿ ನಡೆದಿದೆ.
ತೋಟದಲ್ಲಿ ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧ ಬೆರೆಸಿಟ್ಟು, ಅದನ್ನು ತಿಂದ ಬಳಿಕ ಪ್ರಜ್ಞೆ ತಪ್ಪಿ ಬಿದ್ದ ಮಂಗಗಳ ತಲೆಗೆ ಬಲವಾಗಿ ಹೊಡೆದು ಕೊಂದ ನಂತರ ರಸ್ತೆಗೆ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
ಸತ್ತ ಮಂಗಗಳ ತಲೆಯಲ್ಲಿ ಒಂದೇ ರೀತಿಯ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಮಂಗಗಳ ಮಾರಣ ಹೋಮಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ
ಘಟನೆ ಬಳಿಕ ಸ್ಥಳಕ್ಕೆ ಡಿಎಫ್ಓ, ಆರ್ಎಫ್ಓ, ಪಿಎಸ್ಐ, ಪಶುವೈದ್ಯರು, ಪಂಚಾಯ್ತಿ, ಆಶಾ ಕಾರ್ಯಕರ್ತೆಯರು ಸೇರಿ ವಿವಿಧ ಇಲಾಖೆಯ ಎಲ್ಲ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.