ಮೈತ್ರಿಗೆ ಟಾಟಾ ಹೇಳಿದ ಆಮ್ ಆದ್ಮಿ/ 2025ರ ವಿಧಾನ ಸಭೆ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಮುಗಿದು ಬಿಜೆಪಿ ಮಿತ್ರ ಪಕ್ಷಗಳ ನೆರವಿನಿಂದ ರಚಿಸುವ ತಯಾರಿಯಲ್ಲಿದ್ದರೆ ಇನ್ನೊಂದೆಡೆ ಇಂಡಿಯಾ ಮೈತ್ರಿ ಕೂಟದಿಂದ ಆಮ್ ಆದ್ಮಿ ಪಕ್ಷ ಹೊರಬಂದಿದೆ. 2025ರ ವಿಧಾನಸಭಾ ಚುನಾವಣೆಗೆ ಆಪ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ ಎಂದು ಆಪ್ ಸಚಿವ ಗೋಪಾಲ್ ರೈ ಘೋಷಣೆ ಮಾಡಿದ್ದಾರೆ.

Ad Widget ... ..

ಲೋಕಸಭಾ ಚುನಾವಣೆಗಾಗಿ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಟ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆಮ್ ಆದ್ಮಿ ಪಾರ್ಟಿ ಲೋಕಸಭಾ ಚುನಾವಣೆಗಾಗಿ ಮಾಡಿದ ಮೈತ್ರಿಗೆ ಸಂಪೂರ್ಣ ಬೆಂಬಲ ನೀಡಿ ಪಾಲುದಾರರಾಗಿತ್ತು. ಇದೀಗ ಲೋಕಸಭೆ ಚುನಾವಣೆ ಮುಗಿದಿದೆ. ಹೀಗಾಗಿ ಇನ್ನು ಆಪ್‍ಗೆ ಮೈತ್ರಿ ಅವಶ್ಯಕತೆ ಇಲ್ಲ ಎಂದು ಗೋಪಾಲ್ ರೈ ಹೇಳಿದ್ದಾರೆ.

Ad Widget

2025ರಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ದೆಹಲಿ ಚುನಾವಣೆಗೆ ಆಪ್ ಯಾವುದೇ ಮೈತ್ರಿ ಇಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಗೋಪಾಲ್ ರೈ ಸ್ಪಷ್ಟಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ದೆಹಲಿಯ 7 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಆಪ್ ಮೈತ್ರಿ ಮೂಲಕ ಸ್ಪರ್ಧಿಸಿತ್ತು. ಆದರೆ ದೆಹಲಿ 7 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ.

Leave a Comment

Your email address will not be published. Required fields are marked *