Ad Widget .

ಎನ್ ಡಿಎ ಸರ್ಕಾರದ ಜೊತೆಗೆ ಮೈತ್ರಿಗೆ ಬೆಂಬಲ ನೀಡಿದ ನಾಯ್ಡು, ನಿತೀಶ್| ನಮೋಗೆ ಬೆಂಬಲ ಪತ್ರ ನೀಡಿದ‌ ನಾಯಕರು

ಸಮಗ್ರ ನ್ಯೂಸ್: ಎನ್‌ ಡಿಎ ಸರ್ಕಾರ ರಚನೆಯ ಬಗ್ಗೆ ಊಹಾಪೋಹಗಳ ಮಧ್ಯೆ, ಆಡಳಿತಾರೂಢ ಮೈತ್ರಿ ಪಾಲುದಾರರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಬಿಜೆಪಿಗೆ ಬೆಂಬಲ ಪತ್ರವನ್ನು ಹಸ್ತಾಂತರಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಹಿನ್ನಲೆಯಲ್ಲಿ 3ನೇ ಬಾರಿಗೆ ಮೋದಿ ಪ್ರಧಾನ ಮಂತ್ರಿಯಾಗೋದಕ್ಕೆ ಸಜ್ಜಾಗಿದ್ದಾರೆ. ಇಂದೇ 3ನೇ ಅವಧಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಎನ್ ಡಿಎ ರಾಷ್ಟ್ರಪತಿ ಮುರ್ಮು ಭೇಟಿಯಾಗೋ ಸಾಧ್ಯತೆ ಇದೆ ಎಂಬುದಾಗಿ ವರದಿಗಳಿಂದ ತಿಳಿದು ಬಂದಿದೆ.

Ad Widget . Ad Widget . Ad Widget .

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎನ್ಡಿಎ ಅಂಗಪಕ್ಷಗಳ ನಾಯಕರು ಇಂದು ರಾಷ್ಟ್ರಪತಿಗಳನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸುವ ಸಾಧ್ಯತೆಯಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಏಕ್ ನಾಥ್ ಶಿಂಧೆ, ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ ಮತ್ತು ಪ್ರಫುಲ್ ಪಟೇಲ್ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ. ಜಯಂತ್ ಮತ್ತು ಅನುಪ್ರಿಯಾ ಪಟೇಲ್ ಕೂಡ ಅವರೊಂದಿಗೆ ಹೋಗಲಿದ್ದಾರೆ.

ಇದೇ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಎನ್ ಡಿಎ ನಾಯಕರು, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಸೇರಿದಂತೆ ವಿವಿಧ ಸಂಸದರೊಂದಿಗೆ ಸಭೆಯನ್ನು ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ನೂತನ ಸರ್ಕಾರ ರಚನೆಗೆ ಫೈನಲ್ ಮಾಡೋ ಸಾಧ್ಯತೆ ಇದೆ. ಆ ಬಳಿಕ ರಾಷ್ಟ್ರಪತಿ ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸೋ ಸಾಧ್ಯತೆ ಇದೆ.

Leave a Comment

Your email address will not be published. Required fields are marked *