ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ದಿನೇಶ್ ಕಾರ್ತಿಕ್

ಸಮಗ್ರ ನ್ಯೂಸ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ಹಾಗೂ ಆರ್‍ಸಿಬಿಯ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಣೆ ಮಾಡಿದ್ದು, ವಿದಾಯದ ಮಾಹಿತಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Ad Widget ... ..

“ನಾನು ಅಧಿಕೃತವಾಗಿ ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ ಮತ್ತು ಮುಂದೆ ಇರುವ ಹೊಸ ಸವಾಲುಗಳಿಗೆ ನಾನು ಸಿದ್ಧನಾಗಿರುವಾಗ, ಆಟದ ದಿನಗಳನ್ನು ನನ್ನ ಹಿಂದೆ ಇಡುತ್ತೇನೆ” ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ.

Ad Widget

ಆರ್‍ಸಿಬಿ ಪರವಾಗಿ ಪ್ಲೇಆಫ್‍ನಲ್ಲಿ ಆಡಿದ ಬೆನ್ನಲ್ಲಿಯೇ ಅವರು ನಿವೃತ್ತಿಯಾಗುತ್ತಾರೆ ಎನ್ನಲಾಗಿತ್ತು. ಶನಿವಾರ ಇವರು ಅಧಿಕೃತವಾಗಿ ಇದನ್ನು ಘೋಷಣೆ ಮಾಡಿದ್ದಾರೆ.
ಐಪಿಎಲ್ ಮಾತ್ರವಲ್ಲ ಎಲ್ಲಾ ಮಾದರಿಯ ಕ್ರಿಕೆಟ್ ಗೂ ಅವರು ವಿದಾಯ ಹೇಳಿದ್ದಾರೆ.

‘ಕಳೆದ ಕೆಲವು ದಿನಗಳಿಂದ ಸಾಕಷ್ಟು ಯೋಚನೆ ಮಾಡಿದ ಬಳಿಕ, ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಹೇಳಬೇಕು ಎಂದು ನಿರ್ಧಾರ ಮಾಡಿದ್ದೆ. ಈಗ ಅದನ್ನೇ ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದು, ನನ್ನ ಆಟದ ದಿನಗಳನ್ನು ಹಿಂದೆ ಇಡಲು ಬಯಸಿದ್ದು, ಮುಂದಿನ ಸವಾಲುಗಳಿಗೆ ಸಿದ್ಧವಾಗಿದ್ದೇನೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *