ಕಮಲ‌ ಪಾಳಯಕ್ಕೆ‌ ಸಿಹಿ ನೀಡಿದ ಎಕ್ಸಿಟ್ ಪೋಲ್| ಯಾರಿಗೆ ಎಷ್ಟು ಸೀಟು? ಇಲ್ಲಿದೆ ಫುಲ್‌ ಡೀಟೈಲ್ಸ್…

ಸಮಗ್ರ ನ್ಯೂಸ್: ಎನ್‌ಡಿಎ ಮೈತ್ರಿಕೂಟ 350ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು 4 ಎಕ್ಸಿಟ್ ಪೋಲ್ ಗಳು ಭವಿಷ್ಯ ನುಡಿದಿದೆ.

Ad Widget ... ..

ಇಂಡಿಯಾ ನ್ಯೂಸ್-ಡಿ ಡೈನಾಮಿಕ್ಸ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಮೈತ್ರಿಕೂಟ 371 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದರೆ, ಇಂಡಿಯಾ ಮೈತ್ರಿಕೂಟ 125 ಸ್ಥಾನಗಳಿಗಷ್ಟೆ ತೃಪ್ತಿ ಪಟ್ಟುಕೊಳ್ಳಲಿದೆ. ಇತರರು 47 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ.

Ad Widget

ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಮೈತ್ರಿಕೂಟ 362-392 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಮೈತ್ರಿಕೂಟ 141-161 ಸ್ಥಾನ ಗಳಿಸಲಿದೆ. ಇತರರು 10-20 ಸ್ಥಾನ ಗಳಿಸಲಿದ್ದಾರೆ.

ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 353-368 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದ್ದರೆ, ಇಂಡಿಯಾ ಮೈತ್ರಿಕೂಟ 118-133 ಸ್ಥಾನಕ್ಕಷ್ಟೆ ಸೀಮಿತವಾಗಲಿದೆ. ಇತರರು 43-48 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆ.

ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 359 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಮೈತ್ರಿಕೂಟ ಕೇವಲ 154 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ. ಇತರರು 30 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಈ ನಾಲ್ಕು ಸಮೀಕ್ಷೆಗಳ ಸರಾಸರಿ ಆಧಾರದಲ್ಲಿ ಎನ್‌ಡಿಎ 350ಕ್ಕಿಂತ ಹೆಚ್ಚು ಹಾಗೂ ಇಂಡಿಯಾ ಮೈತ್ರಿಕೂಟ 125-150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ʼಪೋಲ್ ಆಫ್ 4 ಎಕ್ಸಿಟ್ ಪೋಲ್ಸ್ʼ ಅಂದಾಜಿಸಿದೆ.

Leave a Comment

Your email address will not be published. Required fields are marked *