ವಿಜಯಪುರ : ಮೃತಪಟ್ಟ ನವಜಾತ ಶಿಶುವನ್ನು ಚರಂಡಿಗೆ ಎಸೆದ ಪಾಪಿ ತಾಯಿ

ಸಮಗ್ರ ನ್ಯೂಸ್ : ಮಹಿಳೆಯೊಬ್ಬಳು ಮೃತಪಟ್ಟ ನವಜಾತ ಶಿಶುವನ್ನು ಚರಂಡಿಗೆ ಎಸೆದು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಲಕೊಪ್ಪರ ಗ್ರಾಮದಲ್ಲಿ ನಡೆದಿದೆ.

Ad Widget ... ..

ಮಹಿಳೆಯ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆ ಮೃತಪಟ್ಟ ನವಜಾತ ಶಿಶುವನ್ನು ಪ್ಲಾಸ್ಟಿಲ್ ಹಾಳೆಯಲ್ಲಿ ಸುತ್ತಿ ಚರಂಡಿಗೆ ಎಸೆದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ.

Ad Widget

ಶಿಶುವನ್ನು ಗಮನಿಸಿದ ಗ್ರಾಮಸ್ಥರು ಚರಂಡಿಯಿಂದ ಗಂಡು ಮಗುವನ್ನು ಮೇಲಕ್ಕೆತ್ತಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮುದ್ದೇಬಿಹಾಳ ಪೊಲೀಸರು ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *