ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಮತ್ತೊಂದು ಪದಕ ಫಿಕ್ಸ್

ಟೋಕಿಯೋ: ಭಾರತದ ಪಾಲಿಗೆ ಇಂದು ಶುಭ ಶುಕ್ರವಾರ. ಮಹಿಳಾ ಬಾಕ್ಸಿಂಗ್ ಕ್ವಾರ್ಟರ್ ಫೈನಲ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಚೈನೀಸ್‌ ತೈಪೆಯ ಚೆನ್‌ ನೀನ್‌-ಚಿನ್‌ ವಿರುದ್ದ 4-1 ಅಂತರದಲ್ಲಿ ಜಯಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಹಿನ್ನಲೆ ಭಾರತಕ್ಕೆ ಮತ್ತೊಂದು ಪದಕ ಖಚಿತ ಪಡಿಸಿದ್ದಾರೆ.

Ad Widget ... ..

ಮಹಿಳಾ ವಾಲ್ಟರ್‌ವೇಟ್‌ ವಿಭಾಗದಲ್ಲಿ ಚೈನೀಸ್‌ ತೈಪೆಯ ಚೆನ್‌ ನೀನ್‌-ಚಿನ್‌ ಎದುರು ಪ್ರಾಬಲ್ಯ ಮೆರದ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದಾರೆ. ಲೊವ್ಲಿನಾ ಬೊರ್ಗೊಹೈನ್ ಇದೀಗ ಕಂಚಿನ ಪದಕ ಖಚಿತ ಪಡಿಸಿಕೊಂಡಿದ್ದು, ಸೆಮಿಫೈನಲ್‌ನಲ್ಲಿ ಗೆಲುವು ದಾಖಲಿಸಿದರೆ ಚಿನ್ನ ಅಥವಾ ಬೆಳ್ಳಿ ಪದಕಕ್ಕಾಗಿ ಫೈಪೋಟಿ ನಡೆಸಬಹುದಾಗಿದೆ. ಒಂದು ವೇಳೆ ಸೆಮೀಸ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಸೋತರೂ ಕಂಚಿನ ಪದಕ ಭಾರತೀಯ ಬಾಕ್ಸರ್ ಪಾಲಾಗಲಿದೆ.

Ad Widget

Leave a Comment

Your email address will not be published. Required fields are marked *