ಕೋಲಾರ : ಇವಿಎಂ ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟ

ಸಮಗ್ರ ನ್ಯೂಸ್‌ : ಇವಿಎಂ‌ ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟಗೊಂಡ ಘಟನೆ ಕೋಲಾರದ ವಡಗೂರ್ ಗೇಟ್ ಬಳಿ ನಡೆದಿದೆ. ಮುಳಬಾಗಿಲಿನಿಂದ ಕೋಲಾರದ‌ ಸ್ಟ್ರಾಂಗ್ ರೂಂಗೆ ಇವಿಎಂ ಸಾಗಿಸಲಾಗುತ್ತಿತ್ತು. ಈ ವೇಳೆ ಕ್ಯಾಂಟರ್‌ ವಾಹನದ ಟೈರ್‌ ಸ್ಫೋಟಗೊಂಡಿದೆ.

Ad Widget ... ..

ಅದೃಷವಶಾತ್‌ ಕ್ಯಾಂಟರ್‌ ವಾಹನದಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಬ್ಬಂದಿಯಿಂದ ವಾಹನದ ಟೈರ್ ಬದಲಾಯಿಸುವ ಕಾರ್ಯ ಮುಂದುವರಿದಿದ್ದು, ವಾಹನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

Ad Widget

ಇವಿಎಂ ಇರುವ ಕ್ಯಾಂಟರ್‌ ಅನ್ನು ಸೀಲ್ ಮಾಡಿರುವುದರಿಂದ‌ ವಾಹನದ ರಿಪೇರಿಯಾದ‌ ನಂತರ ಸ್ಟ್ರಾಂಗ್ ರೂಂಗೆ ರವಾನೆ ಮಾಡಲಾಗುತ್ತದೆ. ಸ್ಥಳದಲ್ಲೇ‌ ತಹಸೀಲ್ದಾರ್ ಹಾಗೂ ಪೊಲೀಸ್ ‌ಸಿಬ್ಬಂದಿ ಇದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Leave a Comment

Your email address will not be published. Required fields are marked *