Ad Widget .

ಹೊಸದಿಲ್ಲಿ : ಎವರೆಸ್ಟ್‌ ಫಿಶ್‌ ಕರಿ ಮಸಾಲೆಯನ್ನು ಬ್ಯಾನ್‌ ಮಾಡಿದ ಸಿಂಗಾಪುರ

ಸಮಗ್ರ ನ್ಯೂಸ್‌ : ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ ತಯಾರಕ ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ಬ್ಯಾನ್‌ ಮಾಡಲು ಸಿಂಗಾಪುರ ಆದೇಶಿಸಿದೆ. ಇದರಲ್ಲಿ ಸುರಕ್ಷಿತ ಮಿತಿಯನ್ನು ಮೀರಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಇದೆ ಎಂದು ಆರೋಪಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು SFA ಹೇಳಿದೆ.

Ad Widget . Ad Widget . Ad Widget .

ಸಿಂಗಾಪುರದ ಆಹಾರ ನಿಯಮಗಳ ಅಡಿಯಲ್ಲಿ, ಎಥಿಲೀನ್ ಆಕ್ಸೈಡ್ ಅನ್ನು ಮಸಾಲೆಗಳ ಸ್ಟೆರಿಲೈಸೇಶನ್‌ನಲ್ಲಿ ಮಾತ್ರ ಬಳಸಲು ಅನುಮತಿಸಲಾಗಿದೆ ಎಂದು SFA ಹೇಳಿದೆ. ಕಡಿಮೆ ಮಟ್ಟದ ಎಥಿಲೀನ್ ಆಕ್ಸೈಡ್‌ ಸೇರಿರುವ ಆಹಾರವನ್ನು ಸೇವಿಸುವುದರಿಂದ ತಕ್ಷಣದ ಅಪಾಯವಿಲ್ಲ. ಆದರೆ ಇದರ ದೀರ್ಘಕಾಲಿಕ ಬಳಕೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸಂಸ್ಥೆ ಮಾಹಿತಿಯನ್ನು ನೀಡಿದೆ.

ಈ ಉತ್ಪನ್ನಗಳನ್ನು ಸೇವಿಸಿದವರು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಗ್ರಾಹಕರು ವಿಚಾರಣೆಗಾಗಿ ತಮ್ಮ ಖರೀದಿ ಕೇಂದ್ರವನ್ನು ಸಂಪರ್ಕಿಸಬಹುದು” ಎಂದು SFA ತಿಳಿಸಿದೆ.

Leave a Comment

Your email address will not be published. Required fields are marked *