ಮಂಗಳೂರಿನಲ್ಲಿ ನಮೋ ಮೇನಿಯಾ| ರೋಡ್ ಶೋ ಮುಖಾಂತರ ಮತ ಪ್ರಚಾರ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾಡಿದ್ದು, ಸಾವಿರಾರು ಜನರು ಮೋದಿಯನ್ನು ನೋಡಲು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಟ್ಟಡ, ಕಾಂಪೌಂಡ್ ಮೇಲೇರಿ ನಿಂತು ಮೋದಿ ರೋಡ್ ಶೋ ವೀಕ್ಷಿಸಿದ್ದಾರೆ.

Ad Widget ... ..

ನಾರಾಯಣಗುರು ವೃತ್ತದಿಂದ ನವಭಾರತ ವೃತ್ತದವರೆಗೆ ಅಂದರೆ ಸುಮಾರು 2 ಕಿ.ಮೀ. ರೋಡ್​ಶೋ ನಡೆಸಿದ್ದು, ನಗರದೆಲ್ಲೆಡೆ ಮೋದಿ, ಮೋದಿ ಜೈ ಘೋಷ ಮೊಳಗಿದೆ. ಇನ್ನೂ ಪ್ರಧಾನಿ ನಾರಾಯಣ ಗುರು ಪುತ್ಥಳಿಗೆ ನಮಸ್ಕರಿಸಿ ರೋಡ್ ಶೋ ಆರಂಭಿಸಿದರು.

Ad Widget

ರಸ್ತೆಯುದ್ದಕ್ಕೂ ಜನಸಾಗರ ಹರಿದು ಬಂದಿತ್ತು. ಕೇಸರಿ ಕೋಟೆಯಲ್ಲಿ ಜನರನ್ನು ನೋಡಿ ಮೋದಿ ಸಂತಸ ಪಟ್ಟರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರವಾಗಿ ಮತಯಾಚಿಸಿದ್ದಾರೆ. ಮೋದಿ ಭಾವಚಿತ್ರ ಹಿಡಿದು ಕೆಲವರು ಘೋಷಣೆ ಕೂಗಿದ್ದರೆ, ಇನ್ನೂ ಕೆಲವು ಕಾರ್ಯಕರ್ತರು ಹೂ ಎಸೆದು ಖುಷಿ ವ್ಯಕ್ತಪಡಿಸಿದ್ದಾರೆ. ಕಮಲದ ಚಿಹ್ನೆ ತೋರಿಸಿ ಕಾರ್ಯಕರ್ತರಿಗೆ ಮೋದಿ ಹುರುಪು ತುಂಬಿದರು

Leave a Comment

Your email address will not be published. Required fields are marked *