ಲಕ್ಷದ್ವೀಪದಲ್ಲಿ ಶಾಖೆ ತೆರೆದ ಎಚ್‍ಡಿಎಫ್‍ಸಿ

ಸಮಗ್ರ ನ್ಯೂಸ್: ಲಕ್ಷದ್ವೀಪದ ಕವರಟ್ಟಿಯಲ್ಲಿ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎನಿಸಿರುವ ಎಚ್‍ಡಿಎಫ್‍ಸಿ ತನ್ನ ಮೊದಲ ಶಾಖೆ ತೆರೆಯುವ ಮೂಲಕ ಲಕ್ಷದ್ವೀಪದಲ್ಲಿ ಶಾಖೆ ತೆರೆದ ಮೊದಲ ಖಾಸಗಿ ಬ್ಯಾಂಕ್ ಎನಿಸಿಕೊಂಡಿದೆ.

Ad Widget ... ..

‘ಜನರು ಎಲ್ಲಿರುತ್ತಾರೋ ಅಲ್ಲಿಯೇ ಸೇವೆಯನ್ನು ಒದಗಿಸಬೇಕು ಎನ್ನುವುದು ನಮ್ಮ ಬ್ಯಾಂಕ್‍ನ ಉದ್ದೇಶ. ಲಕ್ಷದ್ವೀಪದಲ್ಲಿರುವ ವ್ಯಕ್ತಿಗಳಿಗೆ, ಕುಟುಂಬಗಳಿಗೆ ಹಾಗೂ ಉದ್ಯಮದಾರರಿಗೆ ಸೇವೆಯನ್ನು ನೀಡಲು ಉತ್ಸುಕರಾಗಿದ್ದೇವೆ’ ಎಂದು ಬ್ಯಾಂಕ್‍ನ ಮುಖ್ಯಸ್ಥ ಎಸ್. ಸಂಪತ್‍ಕುಮಾರ್ ತಿಳಿಸಿದ್ದಾರೆ.

Ad Widget

ಭಾರತೀಯ ನೌಕಾಪಡೆಯ ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಲವಕೇಶ್ ಅವರು ಲಕ್ಷದ್ವೀಪದಲ್ಲಿ ಕಾರ್ಯಾರಂಭ ಮಾಡಿದ ಎಚ್‍ಡಿಎಫ್‍ಸಿಯ ಮೊದಲ ಶಾಖೆಗೆ ಚಾಲನೆ ನೀಡಿದರು. ಈ ವೇಳೆ ಬ್ಯಾಂಕ್‍ನ ಇತರ ಅಧಿಕಾರಿಗಳು ಹಾಜರಿದ್ದರು ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *