Ad Widget .

ದಾವಣಗೆರೆ: ಅತ್ತೆ, ಮಾವನ ಸಿಟ್ಟಿಗೆ ಅಡಿಕೆ ಮರ ಕಡಿದು ಹಾಕಿದ ಸೊಸೆ!

ಸಮಗ್ರ ನ್ಯೂಸ್‌ : ಸೊಸೆಯೊಬ್ಬಳು ತನ್ನ ಅತ್ತೆ, ಮಾವನ ಮೇಲಿನ ಕೋಪದಿಂದ ಅಡಿಕೆ ಮರಗಳನ್ನೇ ಕಡಿದು ಹಾಕಿದ ಘಟನೆ ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ರೂಪಾ ಕುಮಾರಸ್ವಾಮಿ ಅಡಿಕೆ ಮರಗಳನ್ನು ಕಡಿದು ಹಾಕಿದ ಆರೋಪಿ ಸೊಸೆ. ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಗೆ ಮೂವರು ಪುತ್ರರಿದ್ದಾರೆ. ಹಿರಿಯ ಪುತ್ರ ಕುಮಾರಸ್ವಾಮಿಗೆ ರೂಪಾಳೊಂದಿಗೆ ಮದುವೆ ಮಾಡಿಸಲಾಗಿತ್ತು. ಆದರೆ ಮದುವೆಯಾದ ಬಳಿಕ ರೂಪಾ, ಹಲವಾರು ಬಾರಿ ಆಸ್ತಿಯಲ್ಲಿ ಪಾಲು ಕೇಳಿತ್ತಿದ್ದಳು. ಅಲ್ಲದೇ ಮಾವ ಚಿದಾನಂದಸ್ವಾಮಿ ಬಳಿ 8 ಲಕ್ಷ ರೂಪಾಯಿ ‌ಪಡೆದು ಮನೆ ಕೂಡ ಕಟ್ಟಿಸಿಕೊಂಡಿದ್ದಳು. ಸದ್ಯ ಈಕೆ ಮೂರು ವರ್ಷದ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕುವ ಮೂಲಕ ಸಿಟ್ಟು ಹೊರಹಾಕಿದ್ದಾಳೆ.

Ad Widget . Ad Widget .

ಈ ಸಂಬಂಧ ಚಿದಾನಂದ ಸ್ವಾಮಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ನಮಗೆ ವಯಸ್ಸಾಗಿದೆ. ನಮ್ಮನ್ನ ಸರಿಯಾಗಿ ನೋಡಿಕೊಳ್ಳದೆ ಸೊಸೆ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾಳೆ. ಸಾಲದು ಎಂಬಂತೆ ಮಚ್ಚು ತಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಆರೋಪಿ ರೂಪಾಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *