ಚಿಕ್ಕಮಗಳೂರು : ಸಂವಿಧಾನ ಬದ್ದವಾದ ಮತದಾನ ಮಾಡಿ -ಪೂರ್ಣಿಮಾ

. Ad Widget . Ad Widget . Ad Widget .

ಸಮಗ್ರ ನ್ಯೂಸ್‌ : ಸಂವಿಧಾನ ಬದ್ದವಾದ ನಮ್ಮ ಮತ ನಮ್ಮ ಹಕ್ಕು ಏ.೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಡ್ಡಾಯ ಮತದಾನ ಮಾಡಬೇಕೆಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮ ಮತದಾರರಲ್ಲಿ ಮನವಿ ಮಾಡಿದರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಅವರು ತಾಲೂಕು ಪಂಚಾಯಿತಿ ವತಿಯಿಂದ ಆಜಾದ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಅಂಗವಾಗಿ ಕ್ಯಾಂಡಲ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಹಬ್ಬದಲ್ಲಿ ಮತದಾರರು ಸಂಭ್ರಮದಿಂದ ಪಾಲ್ಗೊಳ್ಳಬೇಕು. ತಾಲೂಕು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ರಂಗೋಲಿ ಸ್ಪರ್ಧೆ, ಬೈಕ್‌ ಜಾಥ, ಟ್ರ್ಯಾಕ್ಟರ್‌ ಜಾಥ, ಸ್ತ್ರೀಶಕ್ತಿ ಸಂಘಗಳ ಸಹಯೋಗದಲ್ಲಿ ತಾಲೂಕು ಕಚೇರಿಯಿಂದ ಡಿಸಿ ಕಚೇರಿ ವರೆಗೆ ಜಾಥ ನಡೆಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

Leave a Comment

Your email address will not be published. Required fields are marked *