ಸಾವು ಗೆದ್ದ ಸಾತ್ವಿಕ್| ಕೊಳವೆ ಬಾವಿ ದುರಂತ ಸುಖಾಂತ್ಯ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್‌ನನ್ನು ರಕ್ಷಣೆ ಮಾಡುವಲ್ಲಿ ಎನ್‌ಡಿಆರ್‌ಎಫ್‌ ತಂಡವು ಯಶಸ್ವಿಯಾಗಿದೆ. ಬದುಕಿ ಬಂದ ಕಂದಮ್ಮನನ್ನು ಆಸ್ಪತ್ರೆಯತ್ತ ಕರೆದೊಯ್ಯಲಾಗುತ್ತಿದೆ.

. Ad Widget . Ad Widget . Ad Widget .

ಸತೀಶ್, ಪೂಜಾ ದಂಪತಿಯ ಮಗ ಸಾತ್ವಿಕ್ ಆಟವಾಡುತ್ತಾ ಆಯತಪ್ಪಿ 20 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಆರಂಭಿಸಿದ್ದ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಸ್ಥಳಕ್ಕಾಗಮಿಸಿದ ಬೆಳಗಾವಿ, ಕಲಬುರಗಿ ಹಾಗೂ ಹೈದರಾಬಾದ್‌ ಎನ್‌ಡಿಆರ್‌ಎಫ್‌ ತಂಡವು ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಇದಕ್ಕೆ ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಸಾಥ್ ನೀಡಿದರು. ಸುದೀರ್ಘ ಕಾರ್ಯಾಚರಣೆಯಿಂದ ಬಾಲಕ ತಾಯಿಯ ಮಡಿಲು ಸೇರಿದ್ದಾನೆ

Leave a Comment

Your email address will not be published. Required fields are marked *