ಶಿವಮೊಗ್ಗ : ಲಾಡ್ಜ್‌ ನಲ್ಲಿ ಯುವತಿಯ ಕತ್ತು ಸೀಳಿ ಬರ್ಬರ ಹತ್ಯೆ

ಸಮಗ್ರ ನ್ಯೂಸ್‌ : ಲಾಡ್ಜ್‌ವೊಂದರಲ್ಲಿ ಯುವತಿಯೊಬ್ಬಳ ಬರ್ಬರ ಹತ್ಯೆ ನಡೆದಿರುವ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಚೌಡೇಶ್ವರಿ ದೇವಸ್ಥಾನದ ಪಕ್ಕದ ಲಾಡ್ಜ್‌ನಲ್ಲಿ ನಡೆದಿದೆ.

Ad Widget ... ..

ಕಳೆದ ಸೋಮವಾರ (ಏ.1)ರಂದು ಲಾಡ್ಜ್‌ಗೆ ಬಂದಿದ್ದ ಯುವಕ-ಯುವತಿ ರೂಂ ಬಾಡಿಗೆ ಪಡೆದಿದ್ದರು. ಲಾಡ್ಜ್‌ನಲ್ಲಿ ತಂಗಿದ್ದಾಗ ಜತೆಗೆ ಇದ್ದ ಯುವಕನೇ ಯುವತಿಯ ಕತ್ತು ಸೀಳಿ ಕೊಲೆ ಮಾಡಿ ಓಡಿ ಹೋಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

Ad Widget

ಲಾಡ್ಜ್‌ ಸಿಬ್ಬಂದಿ ರೂಮಿಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತಳ ಗುರುತು ಇನ್ನೂ ಪತ್ತೆಯಾಗಿಲ್ಲ. ತೀರ್ಥಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ತೀರ್ಥಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *