ಸಮಗ್ರ ನ್ಯೂಸ್: 2026ರ ವೇಳೆ ಕಾಂಗ್ರೆಸ್‍ನಲ್ಲಿ ಹಿಂದು ಸಮುದಾಯದಿಂದ ಯಾರೋಬ್ಬರು ಇರುವುದಿಲ್ಲ 2032ರ ವೇಳೆಗೆ ಮುಸ್ಲಿಮರು ಯಾರೂ ಇರುವುದಿಲ್ಲ. 2032 ರೊಳಗೆ ಕಾಂಗ್ರೆಸ್ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ನಾ ಶರ್ಮಾ ಹೇಳಿದ್ದಾರೆ.
ಕೇಂದ್ರ ಸಚಿವ ಹಾಗೂ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಲೋಕಸಭೆ ಚುನಾವಣೆಗೆ ದಿಬ್ರುಗಢ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸ್ಸಾಂ ಸಿಎಂ, ದಿಬ್ರುಗಢದಲ್ಲಿ ಸೋನೋವಾಲ್ ಅವರು ಅಸ್ಸಾಂ ರಾಷ್ಟ್ರೀಯ ಪರಿಷತ್ (ಎಜೆಪಿ) ಲುರಿಂಜ್ಯೋತಿ ಗೊಗೊಯ್ ವಿರುದ್ಧ ಕಣಕ್ಕಿಳಿದಿದ್ದಾರೆ ಎಂದು ಹೇಳುವಾಗ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದರು.
‘ಕಾಂಗ್ರೆಸ್ ಸದಸ್ಯರು ಬಿಜೆಪಿಯತ್ತ ಮುಖ ಮಾಡಿರುವ ವೇಗವನ್ನು ನೀವು ಗಮನಿಸಿರಬಹುದು. ಇದನ್ನು ಗಣನೆಗೆ ತೆಗೆದುಕೊಂಡರೆ, ರಾಜೀವ್ ಭವನದಲ್ಲಿ ಕುರ್ಚಿಗಳು ಮತ್ತು ಕೊಠಡಿಗಳಿವೆ, ಆದರೆ ಅದನ್ನು ಅಕ್ರಮಿಸಲು ಯಾರೋಬ್ಬರು ಇರುವುದಿಲ್ಲ’ ಎಂದರು.
ಇದು ಅಸ್ಸಾಂನಲ್ಲಿನ ಪ್ರಸ್ತುತ ಸನ್ನಿವೇಶವಾಗಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ವೇಗವಾಗಿ ಮುಂದಕ್ಕೆ ಸಾಗಿತು. ನನ್ನ ಪ್ರಕಾರ ಕಾಂಗ್ರೆಸ್ 2032ರ ವೇಳೆಗೆ ಸರ್ವನಾಶವಾಗಲಿದೆ’ ಎಂದು ಹೇಳಿದ್ದಾರೆ.