ಮಂಗಳೂರು: ಅಕ್ರಮ 642 ಲೀಟರ್ ಮದ್ಯ, 1.7 ಕೆಜಿ ಡ್ರಗ್ಸ್ ವಶ

ಸಮಗ್ರ ನ್ಯೂಸ್:‌ 2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 22 ರವರೆಗೆ ಜಿಲ್ಲೆಯಲ್ಲಿ 3,75,022 ರೂಪಾಯಿ ಮೌಲ್ಯದ 642 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ ಹಾಗೂ 5,43,500 ರೂ. ಮೌಲ್ಯದ 1.7 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Ad Widget ... ..

ದೂರವಾಣಿ ಮೂಲಕ (1950) 97 ಸಾರ್ವಜನಿಕರಿಂದ ಮಾಹಿತಿ ಕೋರಿಕೆಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಸಿ-ವಿಸಿಲ್ ಆಪ್ ಮೂಲಕ ಇಲ್ಲಿಯವರೆಗೆ 600 ದೂರುಗಳು ಸ್ವೀಕೃತಗೊಂಡಿದ್ದು ಎಲ್ಲಾ ದೂರುಗಳನ್ನು ವಿಲೇವಾರಿ ಮಾಡಲಾಗಿರುತ್ತದೆ.

Ad Widget

ಎನ್.ಜಿ.ಆರ್.ಎಸ್ ಪೋರ್ಟಲ್ (ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ) ಮೂಲಕ ಜಿಲ್ಲೆಯಲ್ಲಿ ಒಟ್ಟು 36 ದೂರುಗಳು ಸ್ವೀಕೃತಗೊಂಡಿದ್ದು, 31 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment

Your email address will not be published. Required fields are marked *